ವಿಜಯಪುರ: ಇಲ್ಲೊಬ್ಬ ರೈತ ತನ್ನ ಎರಡು ಎಕರೆ ಜಮೀನಿನಲ್ಲಿ ಮುಖ್ಯ ಬೆಳೆ ಯೊಂದಿಗೆ ತರಕಾರಿ ಬೆಳೆದು ಸೈ ಎನಿಸಿಕೊಂಡಿದ್ದಾನೆ.
ಹೌದು !
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಇವಣಗಿ ಗ್ರಾಮದ ಶರಣು ಬಾಗೇವಾಡಿ ಎಂಬ ರೈತ ತನ್ನ ಎರಡು ಎಕರೆ ಜಮೀನಿನಲ್ಲಿ ಮುಖ್ಯ ಬೆಳೆಯಾದ ಜೋಳ, ತೊಗರಿ ಅದರೊಂದಿಗೆ ಕೋತಂಬರಿ, ಮೆಂತೇ, ಹೂ ಕೋಸು, ಹಸಿ ಮೆಣಸಿನ ಕಾಯಿ, ಟೊಮೆಟೋ, ಈರುಳ್ಳಿ ಸೇರಿದಂತೆ ವಿವಿಧ ಬಗೆಯ ತರಕಾರಿಗಳನ್ನ ಬೆಳೆಯುವ ಮೂಲಕ ವರ್ಷಕ್ಕೆ 2 ರಿಂದ 3 ಲಕ್ಷ ಲಾಭ ಗಳಿಸುತ್ತಿದ್ದಾನೆ.
ಇನ್ನೂ ವರ್ಷದ ಬೆಳೆಯೊಂದಿಗೆ ತರಕಾರಿ ಬೆಳೆಯುವುದರಿಂದ ಪ್ರತಿ ಎರಡು ಮೂರು ತಿಂಗಳಿಗೂಮ್ಮೆ ತರಕಾರಿ ಫಸಲನ್ನ ಪಡೆಯಬಹುದಾಗಿದೆ. ಇದರಿಂದ ವರ್ಷವಿಡೀ ರೈತ ಹಣದೊಂದಿಗೆ ವ್ಯವಹಾರ ಮಾಡಬಹುದಾಗಿದೆ.
ಇನ್ನೂ ಹವಾಮಾನ ವೈಪರೀತ್ಯದಿಂದ ವರ್ಷವಿಡೀ ಬೆಳೆದ ಬೆಳೆಯನ್ನ ಕಳೆದುಕೊಂಡು ಪರದಾಡುವ ಬದಲು ರೈತರು ಮುಖ್ಯ ಬೆಳೆಯೊಂದಿಗೆ ತರಕಾರಿ ಬೆಳೆಯುವ ಪದ್ಧತಿಯನ್ನು ರೂಢಿಸಿಕೊಳ್ಳಬೇಕು ಎನ್ನುವುದು ಪಬ್ಲಿಕ್ ನೆಕ್ಸ್ಟ್ ಆಶಯ.
-ಮಂಜು ಕಲಾಲ,
ಪಬ್ಲಿಕ್ ನೆಕ್ಸ್ಟ್ ವಿಜಯಪುರ
PublicNext
01/12/2024 10:33 pm