ವಿಜಯಪುರ: ವಿಜಯಪುರ ಜಿಲ್ಲೆಯ ಆಲಮಟ್ಟಿಯ ಕೆಬಿಜೆಎನ್‌ಎಲ್ ಕಚೇರಿಯಲ್ಲಿ ಸಚಿವ ಆರ್.ಬಿ ತಿಮ್ಮಾಪುರ ಅಧ್ಯಕ್ಷತೆಯಲ್ಲಿ ನವ್ಹೆಂಬರ್ 16ರಂದು ಐಸಿಸಿ ಸಭೆ ನಡೆಯಿತು.
ಈ ವೇಳೆ ಹಿಂಗಾರು ಹಂಗಾಮಿನ ಬೆಳೆಗಳಿಗೆ ಕಾಲುವೆಗೆ ನೀರು ಬಿಡುಗಡೆ ಸಂಬಂಧಿಸಿದಂತೆ 14 ದಿನ ಕಾಲುವೆಗೆ ನೀರು ಬಿಡುಗಡೆಗೆ 10 ದಿನ ಬಂದ್ ಎಂದು ನಿರ್ಧರಿಸಿಲಾಯಿತು. ಐಸಿಸಿ ಸಭೆಯಲ್ಲಿನ ನಿರ್ಧಾರ ಅವೈಜ್ಞಾನಿಕವಾಗಿದೆ. ಜೊತೆಗೆ ಯಾದಗಿರಿ ಹಾಗೂ ಹೊರರಾಜ್ಯಕ್ಕೆ ಹೆಚ್ಚಿನ ನೀರು ಬಿಡುಗಡೆ ಮಾಡುತ್ತಿದ್ದು ಜಲಾಶಯಕ್ಕೆ ಭೂಮಿ ಕಳೆದುಕೊಂಡ ರೈತರಿಗೆ ಅನ್ಯಾಯವಾಗುತ್ತಿದೆ. ಜೊತೆಗೆ ಆಲಮಟ್ಟಿ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯದ ನೀರು ಮರು ಹಂಚಿಕೆ ಆಗಬೇಕು ಎಂದು ವಿಜಯಪುರ ಜಿಲ್ಲೆಯ ರೈತರು ಆಗ್ರಹಿಸಿದ್ದಾರೆ.
ವಿಜಯಪುರ ಜಿಲ್ಲೆಯ ಕೊಲ್ಹಾರ ಭಾಗದಲ್ಲಿ ರೈತರು ಹೆಚ್ಚಾಗಿ ಈರುಳ್ಳಿ ಬೆಳೆಯುತ್ತಾರೆ. ಏಪ್ರಿಲ್ ಅಂತ್ಯದವರೆಗೆ ಕಾಲುವೆಗೆ ನೀರು ಬಿಡುಗಡೆ ಮಾಡಬೇಕು ಅಂತ. ಇನ್ನು ಐಸಿಸಿ ಸಭೆಗೆ ರೈತರ ಪ್ರತಿನಿಧಿಗಳಿಗೂ ಅವಕಾಶ ಕೊಡಬೇಕು. ಆದ್ರೆ ಕೇವಲ ಅಧಿಕಾರಿಗಳು ಜನಪ್ರತಿನಿಧಿಗಳು ಸಭೆ ನಡೆಸುತ್ತಿದ್ದು, ಬೆಳೆಗಳಿಗೆ ನೀರು ಯಾವಾಗ ಬೇಕಾಗುತ್ತದೆ ಎಷ್ಟು ಬೇಕಾಗುತ್ತೆ ಅನ್ನೋದು ಅಧಿಕಾರಿಗಳು, ಹಾಗೂ ಜನಪ್ರತಿನಿಧಿಗಳಿಗೆ ಗೊತ್ತಿರೋಲ್ಲ. ಹಾಗಾಗಿ ಐಸಿಸಿ ಸಭೆಗೂ ರೈತರ ಪ್ರತಿನಿಧಿಗಳಿಗೆ ಅವಕಾಶ ಕೊಡಬೇಕು. ಈಗ ಕೈಗೊಂಡ ವಾರಾಬಂದಿ ನಿರ್ಧಾರ ಕೈಬಿಟ್ಟು ಮತ್ತೆ ಐಸಿಸಿ ಸಭೆ ಕರೆಯಬೇಕು ಅಂತ ಜಿಲ್ಲೆಯ ರೈತರು ಆಗ್ರಹಿಸಿದ್ದಾರೆ.
ವಾಯ್ಸ 3 : ಒಟ್ಟಿನಲ್ಲಿ ಐಸಿಸಿ ಸಭೆ ನಡೆಸುವ ವೇಳೆ ರೈತರನ್ನು ಹೊರಗಿಟ್ಟಿದ್ದು ಆಕ್ರೋಶಕ್ಕೆ ಕಾರಣವಾಗಿದೆ. ಇನ್ನೂ ರೈತರ ಯಾವ ಬೆಳೆಗೆ ಯಾವಾಗ ನೀರು ಬೇಕು ಎಷ್ಟು ದಿನ ಬೇಕು ಎಂಬುದನ್ನು ರೈತರು ನಿರ್ಧಾರ ಮಾಡುತ್ತಾರೆ, ಹೀಗಾಗಿ ಇಂತಹ ಸಭೆಗಳಲ್ಲಿ ರೈತರನ್ನು ತೊಡಗಿಸಿಕೊಂಡು ಅವರಿಂದ ಮಾಹಿತಿ ಪಡೆಯುವದು ಸೂಕ್ತ ಎನ್ನುವದು ಪಬ್ಲಿಕ್ ನೆಕ್ಸ್ಟನ ಆಶಯ.
ಮಂಜು ಕಲಾಲ, ಪಬ್ಲಿಕ್ ನೆಕ್ಸ್ಟ ವಿಜಯಪುರ
PublicNext
19/11/2024 09:36 pm