ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಏಕೀಕರಣಕ್ಕೆ ಶಕ್ತಿ ತುಂಬಿದ ಹಚ್ಚೇವು ಕನ್ನಡದ ದೀಪ - ಡಾ ತೋಂಟದ ಶ್ರೀ

ಬೆಳಗಾವಿ: ಉದಯವಾಗಲಿ ಚಲುವ ಕನ್ನಡ ನಾಡು ಕರ್ನಾಟಕದ ಏಕೀಕರಣಕ್ಕೆ ಮುನ್ನುಡಿ ಬರೆದರೆ ಡಾ ಡಿ ಎಸ್ ಕರ್ಕಿಯವರ ಹಚ್ಚೇವು ಕನ್ನಡದ ದೀಪ ಕವಿತೆ ಅದಕ್ಕೆ ಶಕ್ತಿ ತುಂಬಿ ಏಕೀಕರಣದ ಕೂಗು ಬಲಗೊಳ್ಳಲು ಕಾರಣವಾಯಿತು ಎಂದು ಗದುಗಿನ ಡಾ ತೋಂಟದ ಸಿದ್ದರಾಮ ಶ್ರೀಗಳು ನುಡಿದರು ಅವರು ಬೆಳಗಾವಿ ಯ ಡಾ ಡಿ ಎಸ್ ಕರ್ಕಿ ಸಾಂಸ್ಕೃತಿಕ ಪ್ರತಿಷ್ಠಾನದ  ೨೦೨೪ ನೇ ಸಾಲಿನ ಕರ್ಕಿ ಕಾವ್ಯಶ್ರೀ  ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಹೇಳಿದರು

ಬೆಳಗಾವಿಯಂತಹ ಮರಾಠಿಮಯ ನೆಲದಲ್ಲಿ ಕವಿ ಈ ಕವಿತೆ ರಚಿಸಿದ್ದನ್ನು ನಾವು ಗಮನಿಸಬೇಕು. ಡಾ ಡಿ ಎಸ್ ಕರ್ಕಿಯವರು ಕಟ್ಟಿಕೊಟ್ಟ ಈ ಕವಿತೆ ಎಲ್ಲೆಲ್ಲಿ ಕನ್ನಡಿಗರಿದ್ದಾರೊ ಅಲ್ಲೆಲ್ಲ ಮೊಳಗುತ್ತಲೆ ಇರುತ್ತದೆ ಅದು ಗಡಿನಾಡೆ ಇರಲಿ ನಡುನಾಡೆ ಇರಲಿ ದೇಶವೆ ಇರಲಿ ವಿದೇಶವೆ ಇರಲಿ ಅದು ಕನ್ನಡಿಗರ ಧೇಯಗೀತೆಯಾಗಿ ಕನ್ನಡಿಗರನ್ನು  ಕನ್ನಡಾಭಿಮಾನವನ್ನು ಜಾಗೃತಗೊಳಿಸುತ್ತಲೆ ಇರುತ್ತದೆ‌ ಇಂತಹ ಲೋಕಮಾನ್ಯ ಕವಿ ನಮ್ಮ ಬೆಳಗಾವಿಯವರು ಎಂಬುದು ನಮಗೆ ಹೆಮ್ಮೆಯ ವಿಷಯ ಕನ್ನಡ ಛಂದೋವಿಕಾಸ ದಂತಹ ಪ್ರಬುದ್ದ ಪ್ರಬಂಧ,ನಕ್ಷತ್ರ ಗಾನ,ಭಾವತೀರ್ಥ ಬಣ್ಣದ ಚಂಡು ದಂತಹ ಉತ್ಕೃಷ್ಟ ಸಾಹಿತ್ಯ ಕೊಟ್ಟ ಕವಿಗೆ ಸಿಗಬೇಕಾದ ಗೌರವ ಪುರಸ್ಕಾರಗಳು ಸಿಗದಿರಿವುದು ವಿಷಾದಕರ ಸಂಗತಿ

ಅವರ ಹೆಸರಲ್ಲಿ ಅವರ ಕುಟುಂಬದ ಸದಸ್ಯರು ಅಭಿಮಾನಿಗಳು ಸೇರಿ ಪ್ರತಿಷ್ಠಾನದ ಮೂಲಕ ನಾಡಿನ ಹಿರಿಯ ಸಾಹಿತಿಗೆ ಕರ್ಕಿ ಕಾವ್ಯ ಶ್ರೀ ಪ್ರಶಸ್ತಿ ಕೊಡಲು ಮೊದಲು ಮಾಡಿರಿವುದು ಸ್ತುತ್ಯ ಕೆಲಸ ಈ ವರ್ಷ ನಾಡಿನ ಹಿರಿಯ ಮಕ್ಕಳ ಕ್ಷೇತ್ರದ ಸಾಹಿತಿ ಸಿಂದಗಿಯ ಹ ಮ ಪೂಜಾರರಿಗೆ ಸಂದಿರುವುದು ಯೋಗ್ಯವಾಗಿದೆ ಎಂದು ಅಭಿಪ್ರಾಯ ಪಟ್ಟರು.

  ಕರ್ಕಿಯವರ ಛಂದೋವಿಕಾಸ ಸಾಹಿತ್ಯ ಪ್ರವೇಶಿಸುವ ಪ್ರತಿಯೊಬ್ಬರಿಗೂ ಮಾರ್ಗಸೂಚಿಯಾಗಿದೆ ಕರ್ಕಿಯವರ ಕಾವ್ಯ ಕಲಿಸಿದ ನನಗೆ ಈ ಪ್ರಶಸ್ತಿ ದೊರಕಿರುವುದು ನನ್ನ ಭಾಗ್ಯ ಧಾರವಾಡದ ವಿದ್ಯಾವರ್ಧಕ ಸಂಘದ ಧರೆಗೆ ದೊಡ್ಡವರು ಮತ್ತು ಈ ಕರ್ಕಿ ಕಾವ್ಯಶ್ರೀ ಪ್ರಶಸ್ತಿಗಳು ನನ್ನ ಜೀವನದ ಬಹು ದೊಡ್ಡ ಪ್ರಶಸ್ತಿಗಳೆಂದು ಪ್ರಶಸ್ತಿ ಸ್ವೀಕರಿಸಿದ ಹ ಮ ಪೂಜಾರರು ನುಡಿದರು.

  

Edited By : PublicNext Desk
Kshetra Samachara

Kshetra Samachara

23/11/2024 04:03 pm

Cinque Terre

2.7 K

Cinque Terre

0

ಸಂಬಂಧಿತ ಸುದ್ದಿ