ಬೆಳಗಾವಿ: 2024-25 ನೇ ಸಾಲಿನ ಕರ್ನಾಟಕ ರಾಜ್ಯ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ವತಿಯಿಂದ ಬೆಂಗಳೂರು ವಿದ್ಯಾರಣ್ಯಪುರದಲ್ಲಿ ನಡೆದ ರಾಜ್ಯಮಟ್ಟದ ಸಬ್ ಜೂನಿಯರ್ ಬಾಲಕ ಮತ್ತು ಬಾಲಕಿಯರ ಬಾಕ್ಸಿಂಗ್‌ನಲ್ಲಿ ಬೆಳಗಾವಿ ಜಿಲ್ಲೆಯ ಕ್ರೀಡಾಪಟುಗಳು ಅಮೋಘ ಸಾಧನೆ ಮಾಡಿದ್ದಾರೆ.
ಬೆಳಗಾವಿ ಜಿಲ್ಲಾ ಬಾಕ್ಸಿಂಗ್ ಕ್ರೀಡಾಪಟುಗಳು ಮೂರು ಚಿನ್ನ, ಹಾಗೂ ನಾಲ್ಕು ಬೆಳ್ಳಿ, ನಾಲ್ಕು ಕಂಚಿನ ಪದಕ ಪಡೆದು ಗಡಿ ಜಿಲ್ಲೆ ಬೆಳಗಾವಿಗೆ ಕೀರ್ತಿ ತಂದಿದ್ದಾರೆ. ಬಾಕ್ಸಿಂಗ್‌ನಲ್ಲಿ ಸಾಯಿನಾಥ್ ಕಾಂಬಳೆ, ಸುಪ್ರೀಮ ಮಸೂತಿ, ನಿರೀಕ್ಷಾ ಪಾಟೀಲ್ ಚಿನ್ನದ ಪದಕ ಪಡೆದಿದ್ದರೆ, ಹೇಮಂತ್ ನಾಯಕ್, ಮಹಮದ್ ಅಲಿ ಬಾಳೆಕುಂದ್ರಿ, ಭೂಮಿಕಾ ಕುರುಬರ, ಗಾಯತ್ರಿ ಹಲಗೆಕರ್ ಬೆಳ್ಳಿ ಪದಕ ಪಡೆದಿದ್ದಾರೆ. ಅದೇ ರೀತಿ ಸಮೀಕ್ಷಾ ಸುತಾರ್, ಕರಣ್ ಕುರುಬರ, ಶಶಾಂಕ್ ನಿಂಬಾಳ್ಕರ, ಕೋಟಿ ಭಾಸ್ಕರ್ ಜುವೆಕರ್ ಕಂಚಿನ ಪದಕ ಪಡೆದಿದ್ದಾರೆ.
ಈ ಎಲ್ಲಾ ಕ್ರೀಡಾಪಟುಗಳು ರಾಷ್ಟ್ರಮಟ್ಟದ ಸೌತ್ ಜೋನ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ. ಈ ವಿದ್ಯಾರ್ಥಿಗಳಿಗೆ ಅಂತರಾಷ್ಟ್ರೀಯ ಒಲಿಂಪಿಕ್ ಬಾಕ್ಸಿಂಗ್ ಪಟು ಹಾಗೂ ಅರ್ಜುನ ಪ್ರಶಸ್ತಿ ಪುರಸ್ಕೃತರಾದ ಮುಕುಂದ ಕಿಲ್ಲೇಕರ್, ರಾಷ್ಟ್ರೀಯ ಬಾಕ್ಸಿಂಗ್ ಪಟು ಮಲ್ಲು ಕರಗುಪ್ಪಿ, ವಿಶಾಲ್ ನಿಂಬಾಳ್ಕರ, ಮಹೇಶ ಮಸೂತಿ ಹಾಗೂ ಕಾಕತಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಮಹೇಶ್ ಅಕ್ಕಿ ಮಾರ್ಗದರ್ಶನ ನೀಡಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Kshetra Samachara
04/12/2024 08:25 pm