ಅಥಣಿ : ಬದನೆ ಅಡುಗೆ ಮನೆ ರಾಜ ಎಂದು ಕರೆಲ್ಪಡುವ ಬದನೆ ಬಡವರ ನೆಚ್ಚಿನ ತರಕಾರಿ ಅಂದರು ತಪ್ಪಾಗಲಾರದು. ಅತಿ ಕಡಿಮೆ ಬೆಲೆಗೆ ಸಿಗುವ ಬದನೆ ಎಲ್ಲರ ಅಚ್ಚು ಮೆಚ್ಚು, ಅದರಲ್ಲೂ ಆಯಾ ಪ್ರದೇಶಕ್ಕನುಗುಣವಾಗಿ ಬೇರೆ ಬೇರೆ ಬದನೇಕಾಯಿಗಳನ್ನ ನಾವು ನೋಡಿರುತ್ತೇವೆ. ಅದರಲ್ಲೂ ಕಾಡಿನಲ್ಲಿ ಬೆಳೆಯುವ ಕಾಡು ಬದನೆ ಬಯಲುಸೀಮೆಯಲ್ಲಿ ಬೆಳೆದು ಗಮನ ಸೆಳೆದಿದೆ.
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಜಂಬಗಿ ಗ್ರಾಮದ ರೈತ ರಾಜು ಸಾಳುಂಕೆ ಎಂಬ ರೈತನ ಮನೆಯ ಮುಂದೆ ಅಪರೂಪದ ಕಾಡು ಬದನೆ ಗಿಡ ಕಾಣಿಸಿದ್ದು. ಇದು ರುಚಿಕರ ತರಕಾರಿಯ ಜೊತೆ ಹಲವು ರೋಗಗಳಿಗೆ ರಾಮಬಾಣವಾಗಿದೆ. ಬದನೆಯಲ್ಲಿ ಹಲವು ಬಗೆಯ ಬದನೇಕಾಯಿಗಳನ್ನ ನಾವು ನೋಡಿರುತ್ತೇವೆ ವರ್ಷ ಪೂರ್ತಿ ಬದನೆಕಾಯಿ ನೀಡುವ ಈ ಕಾಡುಬದನೆ ಇಲ್ಲಿ ಕಂಡಿದ್ದು ಬಲು ಅಪರೂಪ
ಹಾಗಿದ್ರೆ ಕಾಡುಬದನೆಯ ಪ್ರಯೋಜನಗಳೇನು?
ಈ ಬದನೆ ಬರಿ ಅಡುಗೆ ಮನೆಗೆ ಸೀಮಿತವಾಗದೆ ಅರೋಗ್ಯಕ್ಕೂ ಬಲು ಉಪಯುಕ್ತ ಔಷಧಿಯಾಗಿದೆ. ಈ ಗಿಡದ ಬೇರಿನಿಂದ ಕಷಾಯ ಮಾಡಿಕೊಂಡು ಕುಡಿಯುವುದರಿಂದ ಮೂತ್ರದಲ್ಲಿನ ಕಲ್ಲಿಗೆ, ಉರಿ ಮೂತ್ರಕ್ಕೆ, ಮೂತ್ರದ ಸೋಂಕಿಗೆ ಒಳ್ಳೆಯ ಔಷಧವಾಗಿದೆ. ಇನ್ನು ಕಾಡು ಬದನೆ ಉತ್ತಮ ತರಕಾರಿಯಾಗಿದ್ದು ಪೋಷಕಾಂಶಗಳು, ಖನಿಜಗಳು ಮತ್ತು ಕಬ್ಬಿಣದ ಅಂಶಗಳಿಂದ ಸಮೃದ್ಧವಾಗಿದೆ. ಇದು ದೇಹಕ್ಕೆ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಈ ಬಂದೆನೆಯಿಂದ ರುಚಿಕರ ಅಡುಗೆಗಳಾದ, ಎಣ್ಣೆಗಾಯಿ, ಬದನೇಕಾಯಿ ಗೊಜ್ಜು, ರಸವಾಂಗಿ, ಸೇರಿದಂತೆ ಬಗೆ ಬಗೆಯ ರುಚಿಕರ ಖಾದ್ಯ ಮಾಡಬಹುದು.
ಸಂಸ್ಕ್ರತದಲ್ಲಿ ಇದನ್ನು ಬೃಹತಿ ಎಂದು ಕರೆಯಲಾಗುತ್ತದೆ. ಈ ಗಿಡದ ಬೇರು ಮತ್ತು ಕಾಯಿ ತುಂಬಾ ಕಾಯಿಲೆಗಳನ್ನು ಗುಣಪಡಿಸುವ ದಿವ್ಯಔಷಧವಾಗಿದೆ ಅಂತಾರೆ ಆಯುರ್ವೇದ ತಜ್ಞರು.
PublicNext
23/11/2024 10:01 am