ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕೋಡಿ: ದೂಧಗಂಗಾ ನದಿ ತೀರದಲ್ಲಿ 10 ಅಡಿಯಷ್ಟು ಬೃಹತ್ ಮೊಸಳೆ ಪತ್ತೆ

ಚಿಕ್ಕೋಡಿ: ಸುಮಾರು 10 ಅಡಿಯಷ್ಟು ಬೃಹತವಾದ ಮೊಸಳೆಯೊಂದು ಪ್ರತ್ಯಕ್ಷವಾದ ಘಟನೆ ಚಿಕ್ಕೋಡಿ ತಾಲೂಕಿನ ಮಲಿಕವಾಡ ಗ್ರಾಮದ ದೂಧಗಂಗಾ ನದಿ ತೀರದಲ್ಲಿ ಬೆಳಕಿಗೆ ಬಂದಿದೆ.

ಈ ಮೊಸಳೆಯನ್ನು ಕಂಡು ಮಲಿಕವಾಡ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಅದಲ್ಲದೆ ನದಿ ತೀರದಲ್ಲಿ ರೈತರು ಪಂಪ್ಸೆಟ್ಗಳನ್ನು ಜೋಡಿಸಲು, ಹೊಲಗದ್ದೆಗಳಿಗೆ ಹೋಗಲು ಹಿಂದಿಟು ಹಾಕುತ್ತಿದ್ದಾರೆ. ಕರ್ನಾಟಕ ಹಾಗೂ ಮಹಾರಾಷ್ಟ್ರಕ್ಕೆ ಸಂಪರ್ಕವನ್ನು ಸಾಧಿಸುವ ಮಲಿಕವಾಡ ದತ್ತವಾಡ ಸೇತುವೆ ಮೇಲೆ ಭಾರೀ ಸಂಖ್ಯೆಯಲ್ಲಿ ಜನರು ಪ್ರಯಾಣಿಸುತ್ತಾರೆ.ಮೇಲಿಂದ ಮೇಲೆ ಈ ಸೇತುವೆಯ ಮೇಲೆ ಮೊಸಳೆಗಳು ಪ್ರತ್ಯಕ್ಷವಾಗುತ್ತಿದ್ದು, ಇದರಿಂದ ಜನರು ಭಯದಿಂದ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು, ಮೊಸಳೆಗಳನ್ನು ಸೆರೆ ಹಿಡಿದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಂತೆ ಗ್ರಾಮಸ್ಥರು ಮನವಿಯನ್ನು ಮಾಡಿಕೊಂಡಿದ್ದಾರೆ.

Edited By : PublicNext Desk
Kshetra Samachara

Kshetra Samachara

19/11/2024 10:21 am

Cinque Terre

5.68 K

Cinque Terre

0

ಸಂಬಂಧಿತ ಸುದ್ದಿ