ಹುಬ್ಬಳ್ಳಿ: ರಾಜ್ಯ ಸರಕಾರ ತಂದಿರುವ ಶಕ್ತಿ ಯೋಜನೆಯಿಂದ ದಿನದಿಂದ ದಿನಕ್ಕೆ ಮಹಿಳೆಯರು ಬಸ್ಸಿನಲ್ಲಿ ಕಿತ್ತಾಡುತ್ತಿದ್ದಾರೆ. ಅಷ್ಟೇ ಅಲ್ದೆ ಹಲವಾರು ಸಮಸ್ಯೆ ಉದ್ಭವವಾಗುತ್ತಿವೆ. ಅದರಂತೆ ಈಗ ಸಿಟಿ ಬಸ್ನಲ್ಲಿ ಸೀಟ್ ಗಾಗಿ ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿಗಳು ಬಡಿದಾಡಿಕೊಂಡ ಘಟನೆ ನಡೆದಿದೆ.
ನೇಕಾರ ನಗರದಿಂದ ಸಿಬಿಟಿಗೆ ಹೋಗುವ ಸಂದರ್ಭದಲ್ಲಿ ಸೀಟ್ ಗಾಗಿ ವಿದ್ಯಾರ್ಥಿಗಳ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಈ ಸಂದರ್ಭದಲ್ಲಿ ಕಂಡೆಕ್ಟರ್ ಅದೆಷ್ಟು ಸಾರಿ ಹೇಳಿದ್ರೂ ಸಹ ವಿದ್ಯಾರ್ಥಿಗಳು ಮಾತು ಕೇಳದೇ ಮತ್ತೆ ಜಗಳ ಆರಂಭ ಮಾಡಿದ್ದಾರೆ. ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದಾರೆ.
ಇನ್ನು ಶಕ್ತಿ ಯೋಜನೆ ಬಂದ ಮೇಲೆ ಡ್ರೈವರ್ ಹಾಗೂ ಕಂಡಕ್ಟರ್ ಸಮಸ್ಯೆ ಕೇಳುವವರೇ ಇಲ್ಲದಂತಾಗಿದೆ. ಯಾಕಂದ್ರೆ ಇಲ್ಲಿ ದಿನವಿಡೀ ಇಂತಹ ಜಗಳ ಬಿಡಿಸುವುದರಲ್ಲೇ ಇವರ ಜೀವನ ಹೋಗುತ್ತಿದೆಯಾ ಅನ್ನಿಸುತ್ತಿದೆ. ಆದ್ದರಿಂದ ಸಾರಿಗೆ ಇಲಾಖೆ ಸಚಿವ್ರೇ ಇದಕ್ಕೆ ಕಡಿವಾಣ ಹಾಕಿ. ಇಲ್ಲ ಅಂದ್ರೇ ಬಸ್ ಗಳ ಸಂಖ್ಯೆ ಹೆಚ್ಚಿಸಿ ಎಂದು ಸಾರ್ವಜನಿಕರು ಒತ್ತಾಯ ಮಾಡುತ್ತಿದ್ದಾರೆ.
Kshetra Samachara
22/11/2024 11:47 am