ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಬಡ್ತಿಗಾಗಿ ಗ್ರಾಪಂ ನೌಕರರ ಹೋರಾಟ- ನ.27ರಿಂದ ಅನಿರ್ದಿಷ್ಟಾವಧಿ ಮುಷ್ಕರ

ಕುಂದಗೋಳ : ಗ್ರಾಮ ಪಂಚಾಯಿತಿ ನೌಕರರನ್ನು ಸಿ ಮತ್ತು ಡಿ ಗೆ ಬಡ್ತಿ ನೀಡಿ ಮೇಲ್ದರ್ಜೆಗೆ ಏರಿಸಲು ಮತ್ತು ಸರ್ಕಾರಿ ಸಿ ಮತ್ತು ಡಿ ಗ್ರೂಪ್ ನೌಕರರಿಗೆ ಇರುವಂತೆ ಪಂಚಾಯತ್ ರಾಜ್ ನೌಕರರಿಗೂ ವೃಂದ ಮತ್ತು ನೇಮಕಾತಿ ನಿಯಮಗಳನ್ನು ತಯಾರಿಸಿ ಅನುಷ್ಠಾನಗೊಳಿಸುವಂತೆ ರಾಜ್ಯ ಸರ್ಕಾರ ಮತ್ತು ಪಂಚಾಯತ್ ರಾಜ್ ಇಲಾಖೆಯನ್ನು ಒತ್ತಾಯಿಸಿ ಇದೇ ನವೆಂಬರ್ 27ರಂದು ಅನಿರ್ದಿಷ್ಟಾವಧಿ ಧರಣಿಯನ್ನು ಬೆಂಗಳೂರಿನ ಫ್ರೀಡಂ ಪಾರ್ಕ್'ನಲ್ಲಿನಡೆಸಲಿದ್ದಾರೆ.

ಈ ಹಿನ್ನೆಲೆಯಲ್ಲಿ ಪಂಚಾಯತ್ ರಾಜ್ ನೌಕರರು ತಮ್ಮ ಗ್ರಾಮೀಣ ಭಾಗದ ನೀರು ಮತ್ತು ನೈರ್ಮಲ್ಯ ಸೇವೆ ಸಹಿತ ಎಲ್ಲಾ ಕಾರ್ಯವನ್ನು ನಿಲ್ಲಿಸಿ ಹೋರಾಟಕ್ಕೆ ಅಣಿಯಾಗಲು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಶ್ರೇಯೋಭಿವೃದ್ಧಿ ಸಂಘ ತಾಲೂಕು ಅಧ್ಯಕ್ಷ ಮಂಜುನಾಥ ದೊಡ್ಡಮನಿ ಅವರು ತಾಲೂಕು ಪಂಚಾಯತ್ ಎಡಿಪಿಆರ್ ಅಧಿಕಾರಿ ಶರಣಕುಮಾರ್ ಜಂತಗಲ್ ಅವರ ಮೂಲಕ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಕುಂದಗೋಳ ತಾಲೂಕಿನ ಗ್ರಾಮ ಪಂಚಾಯಿತಿ ನೌಕರರು ಉಪಸ್ಥಿತರಿದ್ದು, ಅಹವಾಲು ಸಲ್ಲಿಸಿದರು.

Edited By : Shivu K
Kshetra Samachara

Kshetra Samachara

21/11/2024 07:56 pm

Cinque Terre

6.73 K

Cinque Terre

0

ಸಂಬಂಧಿತ ಸುದ್ದಿ