ಹುಬ್ಬಳ್ಳಿ: ನಬಾರ್ಡ್ ವಿಚಾರವಾಗಿ ಸಿಎಂ ಭಾಷಣ ಮಾಡ್ತಿದಾರೆ. ಕರ್ನಾಟಕ ಅಷ್ಟೇ ಅಲ್ಲ, ಬೇರೆ ರಾಜ್ಯಗಳಲ್ಲೂ ಹಣ ಕಡಿತವಾಗಿದೆ. ಮಾನದಂಡದ ಆಧಾರದ ಮೇಲೆ ಕಡಿತ ಮಾಡಲಾಗಿದೆ. ಆದ್ರೆ ಪದೇ ಪದೇ ಕೇಂದ್ರದ ಮೇಲೆ ಸಿಎಂ ದೂರುತ್ತಿದ್ದಾರೆಂದು ಬಿ.ವೈ. ವಿಜಯೇಂದ್ರ ಹೇಳಿದರು.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಕಾರ್ಡ್ ರದ್ದು ಮಾಡ್ತಿರೋದು ಕಪಟ ನಾಟಕ. ಕೈ ಸರ್ಕಾರ ರಾಜ್ಯದ ಜನರಿಗೆ ಬರೆ ಎಳೀತಿದೆ. ಹೀಗಾಗಿ ಸಿದ್ದರಾಮಯ್ಯ ಅಸಮರ್ಥ ಸಿಎಂ ಎಂದು ವಿಜಯೇಂದ್ರ ಹೇಳಿದರು.
ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಕಾರ್ಡ್ ರದ್ದಾಗಿವೆ. ಬಿಪಿಎಲ್ ಕಾರ್ಡ್ ದುರಪಯೋಗ ಮಾಡೋರು ಇದ್ರೆ ಅದು ರದ್ದಾಗಲಿ. ಅದು ಬಿಟ್ಟು ಅಚಾನಕ್ಕಾಗಿ ರದ್ದಾದ್ರೆ ಹೇಗೆ. ಸಿದ್ದರಾಮಯ್ಯ ಜಾಣ್ಮೆ ಬಳಸಿ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೀತಿದಾರೆ. ಅನರ್ಹರು ಇದ್ರೆ ತಗೆದು ಹಾಕಲಿ. ಬಡವರನ್ನು ಬೀದಿಗೆ ತರೋ ಕೆಲಸ ಮಾಡಬಾರದು ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
21/11/2024 05:10 pm