ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ವಕ್ಫ್ ಹೋರಾಟವನ್ನು ಯತ್ನಾಳ, ವಿಜಯೇಂದ್ರ ಶುರು ಮಾಡಿರೋ ಪ್ರಶ್ನೆ ಅಲ್ಲ , ರೈತರಿಗೆ ನ್ಯಾಯ ಸಿಗಬೇಕು - ಬಿ ವೈ ವಿಜಯೇಂದ್ರ

ಹುಬ್ಬಳ್ಳಿ : ವಕ್ಫ್ ಹೋರಾಟವನ್ನು ಯತ್ನಾಳ ಶುರುಮಾಡಿದ್ದೋ, ನಾನು ಶುರು ಮಾಡಿದ್ದು ಪ್ರಶ್ನೆ ಅಲ್ಲ, ಪ್ರಧಾನಿ ಮೋದಿ ಅವರು ವಕ್ಫ ವಿಚಾರವಾಗಿ ಕಮೀಟಿ ಮಾಡಿ, ಕಾಯ್ದೆ ತರಲು ಮೋದಿ ಚಿಂತನೆ ಮಾಡುತ್ತಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ವಿಜಯೇಂದ್ರ ಅವರು, ಇವತ್ತು ಮತ್ತು ನಾಳೆ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ವಕ್ಫ ವಿಚಾರವಾಗಿ ಧರಣಿ ಮಾಡಲು ವಿಚಾರಿಸಿದೆ. ಮೂರು ತಂಡಗಳು ಧರಣಿ ಮಾಡಲಿದ್ದೇವೆ. ಕ್ರೆಡಿಟ್ ಯಾರಾದ್ರೂ ತಗೋಳಿ, ರೈತರಿಗೆ ಅನ್ಯಾಯ ಆಗಬಾರದು.

ಕಾಂಗ್ರೆಸ್ ಶಾಸಕರೇ 50 ಕೋಟಿ ಹಣ ಕೇಳ್ತಿದ್ದಾರೆ, ಹೀಗಾಗಿ ಸಿಎಂ 50 ,ಕೋಟಿ 100 ಕೋಟಿ ಆಫರ್ ಬಗ್ಗೆ ಮಾತಾಡುತ್ತಿದ್ದಾರೆ. ಸಿಎಂ ಯಾವ ಕ್ಷಣದಲ್ಲಿ ಆದರೂ ರಾಜೀನಾಮೆ ಕೊಡಬಹುದು, ಅವರ ಖುರ್ಚಿ ಅಲಗಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ‌ ವೈ ವಿಜೇಂದ್ರ ಅವರು ಗಂಭೀರವಾಗಿ ಆರೋಪಿಸಿದ್ದಾರೆ.

Edited By : Vinayak Patil
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

21/11/2024 07:53 pm

Cinque Terre

14.85 K

Cinque Terre

1

ಸಂಬಂಧಿತ ಸುದ್ದಿ