ಹುಬ್ಬಳ್ಳಿ: ಸಿದ್ದರಾಮಯ್ಯನವರು ಮುಖ್ಯಮಂತ್ರಿ ಹುದ್ದೆಯ ಘನತೆಗೆ ತಕ್ಕ ಹಾಗೆ ನಡೆದುಕೊಳ್ಳಬೇಕು. ವಕ್ಫ್ ವಿಚಾರದಲ್ಲಿ ರೈತರಿಗೆ ಬರೆ ಎಳೆದರು. ಈಗ ಬಡವರ BPL ಕಾರ್ಡ್ ರದ್ದು ಮಾಡ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದರು.
ಹುಬ್ಬಳ್ಳಿಯಲ್ಲಿ ಮಾತನಾಡಿದ ವಿಜಯೇಂದ್ರ, ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆಯಡಿ ಕೇಂದ್ರ ಸರ್ಕಾರ ಶೇಕಡಾ 92.5ರಷ್ಟು ಸಹಾಯ ಮಾಡುತ್ತಿದೆ. ಬಾಕಿ 7.5 ಪರ್ಸೆಂಟ್ ರಾಜ್ಯ ಸರ್ಕಾರ ಸಹಾಯ ಮಾಡುತ್ತೆ. ಯಾವ ಆಧಾರದ ಮೇಲೆ BPL ಕಾರ್ಡ್ ರದ್ದು ಮಾಡಿದ್ರಿ, ಇದಕ್ಕೆ ಮಾನದಂಡ ಏನು? ಎಂದು ಪ್ರಶ್ನಿಸಿದರು.
ಯಾರೋ ಎಲ್ಲಿ ಕೂತು ಪಟ್ಟಿ ಮಾಡ್ತಾರೆ. 11.50 ಲಕ್ಷ ಕಾರ್ಡ್ ರದ್ದು ಮಾಡಿರೋದು ಸರಿ ಅಲ್ಲ. ಸರ್ಕಾರ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯೋ ಕೆಲಸ ಮಾಡುತ್ತಿದೆ. ಬರೋ ದಿನಗಳಲ್ಲಿ 10 ರಿಂದ 15 ಲಕ್ಷ ಕಾರ್ಡ್ ರದ್ದು ಮಾಡ್ತಾರೆ. ಪಾನ್ ಕಾರ್ಡ್ ಆಧಾರದ ಮೇಲೆ ಕಾರ್ಡ್ ರದ್ದು ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕಾರ್ಡ್ ರದ್ದಾದ್ರೆ, ಗೃಹಲಕ್ಷ್ಮೀ ಹಣ ಕೊಡಬಹುದು. ಕಾರ್ಡ್ ರದ್ದಾದರೆ ಸಾವಿರಾರು ಕೋಟಿ ಹಣ ಉಳಿಯುತ್ತೆ, ಅದಕ್ಕಾಗಿ ಹೀಗೆ ಮಾಡ್ತಿದ್ದಾರೆ ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
21/11/2024 05:19 pm