ಕುಂದಗೋಳ: ರಾಜ್ಯದ ಮೂರು ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಗಳಿಸಿದ ಹಿನ್ನೆಲೆಯಲ್ಲಿ ಕುಂದಗೋಳ ಪಟ್ಟಣದ ಕಾಂಗ್ರೆಸ್ ಮುಖಂಡರು ಪಟಾಕಿ ಸಿಡಿಸಿ, ಕೈ ಬಾವುಟ ಹಿಡಿದು ಸಂಭ್ರಮ ಆಚರಿಸಿದರು.
ಕುಂದಗೋಳ ಪಟ್ಟಣದ ಕನಕದಾಸ ವೃತ್ತ ಮತ್ತು ಮೂರಂಗಡಿ ಕೂಟ್ ಬಳಿ ಕಾಂಗ್ರೆಸ್ ಮುಖಂಡರಾದ ಶಿವಾನಂದ ಬೆಂತೂರ, ಮೊಹಮ್ಮದ್ ಸಲೀಂ ಕ್ಯಾಲಕೊಂಡ್, ಜಗದೀಶ್ ಉಪ್ಪಿನ್, ಮಲ್ಲಿಕಾರ್ಜುನ ಕಿರೇಸೂರ, ಈರಪ್ಪ ನಾಗಣ್ಣನವರ ಸೇರಿದಂತೆ ಅನೇಕ ನಾಯಕರು ವಿಜಯೋತ್ಸವದಲ್ಲಿ ಭಾಗಿಯಾದರು.
ಈ ಸಂದರ್ಭ ಮುಖಂಡ ಜಗದೀಶ್ ಉಪ್ಪಿನ್ ಮಾತನಾಡಿ, ಇದು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಮತ್ತು ಜನ ಕಲ್ಯಾಣ ಕೆಲಸಗಳಿಗೆ ಸಂದ ವಿಜಯ ಎಂದರು. ಕುಂದಗೋಳ ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಪಕ್ಷ ಸಂಘಟಕರು ಉಪಸ್ಥಿತರಿದ್ದರು.
Kshetra Samachara
23/11/2024 06:26 pm