ಕುಂದಗೋಳ: ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ವಿಜೇತರಾದ ಅಧ್ಯಕ್ಷ ಮುತ್ತಪ್ಪ ಅಣ್ಣಿಗೇರಿ ಅವರು ಕುಂದಗೋಳ ಪಟ್ಟಣದಲ್ಲಿ ನೌಕರರ ಭವನ ನಿರ್ಮಾಣ ನನ್ನ ಗುರಿ ಎಂದು ಪಬ್ಲಿಕ್ ನೆಕ್ಸ್ಟ್'ಗೆ ತಿಳಿಸಿದ್ದಾರೆ.
ಕುಂದಗೋಳ ತಾಲೂಕು ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ನಡೆದ ಚುನಾವಣೆಯಲ್ಲಿ 22 ಇಲಾಖೆಗಳ 1100 ಸರ್ಕಾರಿ ನೌಕರರ ಪರವಾಗಿ 30 ಮಂದಿ ನಿರ್ದೇಶಕರ ಮತದಾನದ ಮೇಲೆ ಅಧ್ಯಕ್ಷರಾಗಿ ಆಯ್ಕೆಯಾದ ಮುತ್ತಪ್ಪ ಅಣ್ಣಿಗೇರಿಯವರು ಪಬ್ಲಿಕ್ ನೆಕ್ಸ್ಟ್ ಜತೆ ಮಾತನಾಡಿ, ರಾಜ್ಯ ಸರ್ಕಾರಿ ನೌಕರರ ಜ್ವಲಂತ ಸಮಸ್ಯೆ ನಿವಾರಣೆಗೆ ಮತ್ತು ಅವರ ಅಭಿವೃದ್ಧಿಗೆ ಸದಾ ಕರ್ತವ್ಯ ಮಾಡುತ್ತೇನೆ ಎಂದರು.
ಇನ್ನುಳಿದಂತೆ ರಾಜ್ಯ ಸರ್ಕಾರಿ ನೌಕರರ ಸಂಘದ ಖಜಾಂಚಿ ಸ್ಥಾನಕ್ಕೆ ವೀರಣ್ಣ ರಂಗಪ್ಪನವರ, ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ನಾಡಫ್ ಎಚ್.ಪಿ. ಆಯ್ಕೆಯಾದರು. ವಿಜೇತರ ಸಂಭ್ರಮದ ಕ್ಷಣಗಳಲ್ಲಿ ಕುಂದಗೋಳ ತಾಲೂಕಿನ ಎಲ್ಲ ಸರ್ಕಾರಿ ನೌಕರರು ಭಾಗಿಯಾದರು.
Kshetra Samachara
23/11/2024 06:26 pm