ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಬಿಮ್ಸ್ ಆಸ್ಪತ್ರೆ ಮುಂದೆ ಶವ ಇಟ್ಟು ಪರಾರಿಯಾದ ದುರುಳರು - ಕೊಲೆ ಶಂಕೆ

ಬೆಳಗಾವಿ: ಬೆಳಗಾವಿಯಲ್ಲಿ ಗೆಳೆಯರೊಂದಿಗೆ ಪಾರ್ಟಿಗೆ ಹೋಗಿದ್ದ ವ್ಯಕ್ತಿ ನಿಗೂಢ ಸಾವನ್ನಪ್ಪಿದ್ದು, ವ್ಯಕ್ತಿ ಸಾವನ್ನಪ್ಪುತ್ತಲೇ ಆಸ್ಪತ್ರೆ ಮುಂದೆ ಆಟೋದಲ್ಲಿಯೇ ಶವ ಬಿಟ್ಟು ಗೆಳೆಯರು ಹೋಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಬೀಮ್ಸ್ ಎಮರ್ಜನ್ಸಿ ವಾರ್ಡ್ ಮುಂದೆ ಆಟೋದಲ್ಲಿ ಶವ ಬಿಟ್ಟು ದುರುಳರು ಪರಾರಿಯಾಗಿದ್ದಾರೆ. ಆಟೋದಲ್ಲಿನ ಶವ ಕಂಡು ಆಸ್ಪತ್ರೆ ಸಿಬ್ಬಂದಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪಾರ್ಟಿ ಮಾಡಲು ಒಟ್ಟು 10 ಜನ ಹೋಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಆಸ್ಪತ್ರೆ ಮುಂದೆ ಶವ ಇಟ್ಟು ಪರಾರಿಯಾಗಲು ಯತ್ನಿಸುತ್ತಿದ್ದ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.‌

ಬೆಳಗಾವಿ ಶಿವಾಜಿ ನಗರದ ನಿವಾಸಿ ಸಾರಿಗೆ ನೌಕರ ಬಶೀರ್ ಅಹ್ಮದ್ ಚಿಕ್ಕೋಡಿ (55) ನಿಗೂಢ ಸಾವನ್ನಪ್ಪಿದ್ದಾನೆ. ಇಂದು ಬೆಳಗ್ಗೆ ಸ್ನೇಹಿತರ‌ ಜೊತೆಗೆ ಬೆಳಗಾವಿ ತಾಲೂಕಿನ‌ ಸುಳಗಾ ಗ್ರಾಮದ ಜಮೀನೊಂದರಲ್ಲಿ ಪಾರ್ಟಿ ಮಾಡಿದ್ದ ಗೆಳೆಯರೆ ಬಶೀರ್ ಅಹ್ಮದ್ ಚಿಕ್ಕೋಡಿಯನ್ನು ಕೊಲೆ ಮಾಡಿದ್ದಾರೆ ಎಂದು ಮೃತ ವ್ಯಕ್ತಿಯ ಸಂಬಂಧಿಕರಿಂದ ಕೊಲೆ ಆರೋಪ ಮಾಡಿದ್ದಾರೆ. ಬೀಮ್ಸ್ ಆಸ್ಪತ್ರೆಯ ಮುಂದೆ ಸಂಬಂಧಿಕರು ಜಮಾವಣೆ ಆಗುತ್ತಿದ್ದು, ಸ್ಥಳಕ್ಕೆ ಕಾಕತಿ ಮತ್ತು ಎಪಿಎಂಸಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ದೇಹವನ್ನ ಮರಣೋತ್ತರ ಪರೀಕ್ಷೆಗೆ ಶವಾಗಾರಕ್ಕೆ ಸಾಗಿಸಲಾಗಿದೆ. ಹೆಚ್ಚಿನ ಮಾಹಿತಿ ಲಭ್ಯವಾಗಬೇಕಾಗಿದೆ.

Edited By : Nagesh Gaonkar
PublicNext

PublicNext

20/11/2024 10:44 pm

Cinque Terre

49.36 K

Cinque Terre

0

ಸಂಬಂಧಿತ ಸುದ್ದಿ