ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚನ್ನಮ್ಮನ ಕಿತ್ತೂರು : ಕಪ್ಪತಗುಡ್ಡದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಬಾರದು - ಶಿವಕುಮಾರ ಸ್ವಾಮೀಜಿ

ಚನ್ನಮ್ಮನ ಕಿತ್ತೂರು : ಕಪ್ಪತಗುಡ್ಡ ಸಮಸ್ತ ಕರ್ನಾಟಕದ ಜೀವನಾಡಿ, ರಾಜ್ಯಕ್ಕೆ ಮಳೆ ಬೆಳೆ ತರುವಂತಹ ಸಸ್ಯ ಕ್ಷೇತ್ರ. 80 ಸಾವಿರ ಎಕರೆ ಇರುವಂತ ಘಟ್ಟ ಪ್ರದೇಶವಾಗಿರುವ ಗದಗ ಜಿಲ್ಲೆಯ ಕಪ್ಪತಗುಡ್ಡದಲ್ಲಿ ಬಂಡವಾಳ ಶಾಹಿಗಳು ಗಣಿಗಾರಿಕೆ ಮಾಡಲು ಮುಂದಾಗುತ್ತಿದ್ದಾರೆ. ಇದಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿ ಬೆಳಗಾವಿ ಪ್ರಾದೇಶಿಕ ವಿಭಾಗದ ಆಯುಕ್ತ ಎಸ್. ಬಿ. ಶೆಟ್ಟೆಣ್ಣನವರ ಅವರಿಗೆ ನ. 21 ರಂದು ಮುಂಜಾನೆ 11ಕ್ಕೆ ಮನವಿ ಸಲ್ಲಿಸಲಾಗುವುದು’ ಎಂದು ಡೋಣಿ ಗದಗ ನಂದವೇರಿ ಸಂಸ್ಥಾನಮಠದ ಶಿವಕುಮಾರ ಸ್ವಾಮೀಜಿ ತಿಳಿಸಿದರು.

ಸಮೀಪದ ನಿಚ್ಚಣಕಿ ಗ್ರಾಮದ ದಳವಾಯಿ ಅವರ ಮನೆಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮೂವತ್ತು ಜಿಲ್ಲೆಗಳ ರೈತಸಂಘದ ಮುಖಂಡರು, ಪರಿಸರ ಆಸಕ್ತರು ಸೇರಿ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

ಕಪ್ಪತಗುಡ್ಡದಲ್ಲಿಯ ಇದು ರಾಜ್ಯದ ಏಳು ಕೋಟಿ ಜನರ ಭಾವ, ಬಂಧದ ಬೆಸುಗೆ ಮತ್ತು ಆಸ್ತಿಯಾಗಿದೆ. ಕಪ್ಪತಗುಡ್ಡಕ್ಕೆ ಬರಬೇಕಾದರೆ ಅಲ್ಲಿಯ ಜನರ ಪರವಾನಿಗೆ ತೆಗೆದುಕೊಂಡು ಬರಬೇಕು’ ಎಂದು ತಾಕೀತು ಮಾಡಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಈ ಹಿಂದೆ ಕೂಡ ಕಪ್ಪತಗುಡ್ಡದಲ್ಲಿ ಗಣಿಗಾರಿಕೆ ಮಾಡುವ ಆದೇಶ ಹೊರಡಿಸಿದರು. ರಾಜ್ಯದ ಅನೇಕ ಸ್ವಾಮೀಜಿಗಳು ಸೇರಿದಂತೆ ರಾಜ್ಯದ ಜನತೆ ಹೋರಾಟದಿಂದ ಆದೇಶವನ್ನು ಹಿಂಪಡೆದಿದ್ದರು. ಈಗ ಮತ್ತೆ ಅವರು ಅವಕಾಶ ನೀಡುವುದು ಬೇಡ ಎಂದು ಆಗ್ರಹಿಸಿದರು.

ಒಂದು ವೇಳೆ ಸರ್ಕಾರ ಈ ಮನವಿಗೆ ಸ್ಪಂಧಿಸದಿದ್ದರೆ ಕ್ರಾಂತಿ ನೆಲ ಚನ್ನಮ್ಮನ ಕಿತ್ತೂರಿನಿಂದ ರಾಜ್ಯದ ಸ್ವಾಮೀಜಿಗಳು ಹಾಗೂ ಜನತೆಯೊಂದಿಗೆ ಪಾದಯಾತ್ರೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀಕಾಂತ ದಳವಾಯಿ, ಕಿತ್ತೂರು ಕರ್ನಾಟಕ ರೈತ ಜಾಗೃತಿ ಸಂಘಟನೆ ಪ್ರಧಾನ ಕಾರ್ಯದರ್ಶಿ ಅಪ್ಪೇಶ ದಳವಾಯಿ, ಮುಖಂಡರಾದ ಮಡಿವಾಳೆಪ್ಪ ವರಗಣ್ಣವರ, ರಾಜು ದಳವಾಯಿ, ಗಿಡ್ಡಪ್ಪ ಬುಡ್ರಕಟ್ಟಿ, ಶಿವಾನಂದಶಾಸ್ತ್ರಿ ತೊರಗಲ್ಮಠ, ಹನಮಂತ ನಾವಲಗಿ, ಮಲ್ಲಿಕಾರ್ಜುನ ಕಾಳಿಂಗಗೌಡ್ರ ಇದ್ದರು.

Edited By : PublicNext Desk
PublicNext

PublicNext

20/11/2024 07:26 pm

Cinque Terre

27.52 K

Cinque Terre

0

ಸಂಬಂಧಿತ ಸುದ್ದಿ