ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಲಹೊಂಗಲ : ತಹಶೀಲ್ದಾರ್ ಕಚೇರಿಯ ಸಿಬ್ಬಂದಿಗಳ ಕಾರ್ಯವೈಖರಿ ಖಂಡಿಸಿ ಮನವಿ

ಬೈಲಹೊಂಗಲ : ತಹಶೀಲ್ದಾರ್ ಕಚೇರಿಯ ಶಿರಸ್ತೇದಾರ ರಾಘವೇಂದ್ರ ಮತ್ತು ಸಿಬ್ಬಂದಿ ಸುಮಾ ಅವರ ಕಾರ್ಯವೈಖರಿಯನ್ನು ಖಂಡಿಸಿ ಸ್ವಾಭಿಮಾನಿ ಕ್ರಿಯಾಶೀಲ ಗೆಳೆಯರ ಬಳಗ ಹಾಗೂ ರೈತರು ಪ್ರತಿಭಟಿಸಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ಮುಖಂಡ ಮಂಜುನಾಥ ಜ್ಯೋತಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ತಹಶೀಲ್ದಾರ್ ಕಛೇರಿಯ ಭೂಮಿ ವಿಭಾಗದ ಶಿರಸ್ತೇದಾರ ರಾಘವೇಂದ್ರ ಅವರು ತಮ್ಮ ಕರ್ತವ್ಯನಿಷ್ಠೆಯನ್ನು ಮರೆತು ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದಾರೆ. ಪ್ರಜ್ಞಾವಂತ ರೈತರು, ಸಾರ್ವಜನಿಕರೊಂದಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಅಲ್ಲದೇ ಸಿಬ್ಬಂದಿ ಸುಮಾ ಇವರು ಜನಸಾಮಾನ್ಯರು, ರೈತರೊಂದಿಗೆ ದರ್ಪದಿಂದ ಮಾತನಾಡುತ್ತಾರೆ. ರೈತರು ತಮ್ಮ ಸಮಸ್ಯೆಗಳ ಬಗ್ಗೆ ಮಾಹಿತಿ ಕೇಳಲು ಬಂದರೆ ಇತ್ತ ಸಿಬ್ಬಂದಿ ಮಾತ್ರ ಕೈಯಲ್ಲಿ ಮೊಬೈಲ ಹಿಡಿದುಕೊಂಡು, ರೈತರ ಕಾಗದ ಪತ್ರದಲ್ಲಿ ಏನು ಸಮಸ್ಯೆ ಇದೆ ಎಂದು ವಿಚಾರಿಸದೇ ಸತಾಯಿಸುತ್ತಾರೆ. ಪ್ರಜ್ಞಾವಂತರಿಗೇ ಇಂಥ ಪರಿಸ್ಥಿತಿ ನಿರ್ಮಾಣವಾದರೇ ಇನ್ನು ಸಾಮಾನ್ಯ ಮುಗ್ಧ ನಾಗರಿಕರ ಗತಿಯೇನು? ಇವರಿಗೆ ಹೇಳೋರು , ಕೇಳೋರು ಯಾರೂ ಇಲ್ಲದಂತಾಗಿದೆ. ಇದು ಪ್ರಜಾಪ್ರಭುತ್ವ ರಾಷ್ಟ್ರ , ಇಲ್ಲಿ ಪ್ರಜೆಗಳೇ ಮುಖ್ಯಸ್ತರು. ನಮ್ಮ ದೇಶದಲ್ಲಿ ಯಾರೇ ತಪ್ಪು ಮಾಡಿದರೂ ಅವರನ್ನು ಪ್ರಶ್ನಿಸುವ ಹಕ್ಕು ಎಲ್ಲರಿಗೂ ಇದೆ. ಜನಸಾಮಾನ್ಯರ ಕೆಲಸ ಕಾರ್ಯಗಳನ್ನು , ಕುಂದು ಕೊರತೆಗಳನ್ನು ಸರಿಪಡಿಸಲು ಸರಕಾರ ಇಂತ ಸಿಬ್ಬಂದಿಗಳಿಗೆ ಸರಕಾರಿ ಸಂಬಳ ನೀಡಿ ಕೆಲಸ ಮಾಡಲು ನಿಯೋಜನೆ ಮಾಡಿದೆ ಎಂಬುದನ್ನು ಮರೆಯಬಾರದು. ಇವರುಗಳ ವರ್ತನೆ ಬಗ್ಗೆ, ಅಧಿಕಾರಿಗಳ ಗಮನಕ್ಕೆ ಬಂದರೂ ಅವರು ವಿಚಾರಿಸದೇ ನಾಗರೀಕರಿಗೆ ತಿಳುವಳಿಕೆ ಹೇಳುವ ಪರಿಸ್ಥಿತಿ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ವಿಶ್ವಹಿಂದೂ ಪರಿಷತ್‍ನ ಮಲ್ಲಿಕಾರ್ಜುನ ಏನಗಿಮಠ, ಮಾಜಿ ಯೋಧ ಆನಂದ ತೋಟಗಿ, ವಿಠ್ಠಲ ಹಂಪಿಹೊಳಿ, ರಾಜು ದಳವಾಯಿ, ಸಂತೋಷ ಹುಣಶೀಕಟ್ಟಿ, ರವಿ ವನ್ನುರ, ಈರಣ್ಣ ಮೇಲಿಕಟ್ಟಿ, ಆನಂದ ಹಿಟ್ಟಣಗಿ, ಸುನೀಲ ಶಿಂದೊಳ್ಳಿ, ವಿನೋದ ಹಿಟ್ಟಣಗಿ, ಅಭಿಷೇಕ ಹಡಪದ, ಚಂದ್ರು ಉಂಡಿ ಸಾರ್ವಜನಿಕರು ರೈತರು ಬಾಗಿಯಾಗಿದ್ದರು.

Edited By : PublicNext Desk
Kshetra Samachara

Kshetra Samachara

20/11/2024 06:05 pm

Cinque Terre

12.7 K

Cinque Terre

0

ಸಂಬಂಧಿತ ಸುದ್ದಿ