ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿಯಲ್ಲಿಯೂ ರದ್ದಾಗುತ್ತಿವೆ ರೇಷನ್ ಕಾರ್ಡ್: ಜನರಲ್ಲಿ ಹೆಚ್ಚಿದ ಆತಂಕ...!

ಹುಬ್ಬಳ್ಳಿ: ಬಡವರ ರೇಷನ್‌ಕಾರ್ಡ್ ರದ್ದುಗೊಳಿಸಲ್ಲ ಎಂದು ಸಿಎಂ‌ ಸಿದ್ಧರಾಮಯ್ಯ ಭರವಸೆ ನೀಡಿದ್ದಾರೆ. ಆದರೆ ಇಲ್ಲಿ‌ ನೋಡಿ‌ ಬಡವರ ಗೋಳು. ಸದ್ದಿಲ್ಲದೇ ರದ್ದಾಗುತ್ತಿವೆ ಬಡಜನರ ಹೆಸರಲ್ಲಿರೋ‌ ರೇಷನ್ ಕಾರ್ಡ್ ಗಳು. ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲೂ ಬಹುತೇಕ ಗ್ರಾಹಕರ ರೇಷನ್‌ ಕಾರ್ಡ್ ರದ್ದಾಗುತ್ತಿವೆ.

ಏಕಾಏಕಿ‌ ರೇಷನ್‌ಕಾರ್ಡ್ ರದ್ದಾದ ಹಿನ್ನೆಲೆ ಇಲಾಖೆಯ ಕಚೇರಿಗೆ ಆಗಮಿಸುತ್ತಿರೋ ಗ್ರಾಹಕರು. ಆಹಾರ ಮತ್ತು ನಾಗರೀಕ‌ ಸರಬರಾಜು ಇಲಾಖೆ ಮುಂದೆ ಕಣ್ಣೀರು ಹಾಕುತ್ತಿರೋ ಮಹಿಳೆಯರು. ಇದೆಲ್ಲಾ ದೃಶ್ಯಗಳಿಗೆ ಸಾಕ್ಷಿಯಾಗಿದ್ದು, ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ. ಹೌದು.. ತೆರಿಗೆದಾರರ ಹೆಸರಲ್ಲಿ ಬಹುತೇಕ ಜನರ ರೇಷನ್ ಕಾರ್ಡ್ ರದ್ದುಗೊಳಿಸಿದ ಇಲಾಖೆ, ಹುಬ್ಬಳ್ಳಿಯಲ್ಲಿಯೇ ರದ್ದಾಗಿವೆ 1200 ಕ್ಕೂ ಅಧಿಕ ರೇಷನ್ ಕಾರ್ಡ್ ಗಳು. ಬಡ ಜನರ ರೇಷನ್ ಕಾರ್ಡ್ ಗಳನ್ನೇ ಟಾರ್ಗೇಟ್ ಮಾಡಿ‌ ಕಾರ್ಡ್ ರದ್ದು ಮಾಡುತ್ತಿದೆಯಾ ರಾಜ್ಯ ಸರ್ಕಾರ...? ಎಂಬುವಂತ ಅನುಮಾನ ದಟ್ಟವಾಗಿದೆ. ಬಡವರ ಅನ್ನ‌ಭಾಗ್ಯಕ್ಕೆ‌ ಕೊಳ್ಳಿ ಇಡುತ್ತಿದ್ದೆಯಾ ಸರ್ಕಾರ..? ಈ ಬಗ್ಗೆ ಇಲಾಖೆಯ ಅಧಿಕಾರಿಗಳು ಏನಂತಾರೇ ನೋಡಿ.

ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಅನ್ನೋ‌ ಹಾಗೆ ಅರ್ಹ ಫಲಾನುಭವಿಗಳ ಕಾರ್ಡ್ ರದ್ದುಗೊಳಿಸಿರೋ ಸರ್ಕಾರ. ಸರ್ಕಾರದ ಅನ್ನ‌ಭಾಗ್ಯವನ್ನೇ ನಂಬಿ‌ಕುಳಿತ ಬಡ‌ ಕುಟುಂಬಗಳಿಗೆ ಸಿಡಿಲಿನಂತೆ ಬಡಿದ ಇಲಾಖೆಯ ಕಳ್ಳಾಟ. ಏಕಾಏಕಿ‌ ರೇಷನ್ ಕಾರ್ಡ್ ರದ್ದಾದ ಹಿನ್ನೆಲೆ‌ ಆಹಾರ ಇಲಾಖೆಗೆ ಆಗಮಿಸುತ್ತಿರೋ ಅರ್ಹ ಫಲಾನುಭವಿಗಳು, ಕಚೇರಿಗೆ ಆಗಮಿಸಿ ಕಾರ್ಡ್ ರದ್ದು ಕುರಿತು ಪರಿಶೀಲನೆ ಮಾಡುತ್ತಿದ್ದಾರೆ. ಬರಸಿಡಿಲು ಬಡೆದಂತೆ ರೇಷನ್ ಕಾರ್ಡ್ ರದ್ದು ಕುರಿತು ಅಳಲು ತೋಡಿಕೊಂಡ ಗ್ರಾಹಕರು, ಆಹಾರ ಇಲಾಖೆ ಕಚೇರಿಗೆ ಆಗಮಿಸಿ‌ ಕಣ್ಣೀರು‌ ಸುರಿಸುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಸೂಕ್ತ ಕ್ರಮಗಳನ್ನು ಜರುಗಿಸುವ ಕಾರ್ಯವನ್ನು ಮಾಡಬೇಕಿದೆ.

ಮಲ್ಲೇಶ್ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By : Suman K
Kshetra Samachara

Kshetra Samachara

20/11/2024 12:31 pm

Cinque Terre

39.61 K

Cinque Terre

14

ಸಂಬಂಧಿತ ಸುದ್ದಿ