ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ದೇವರ ಮಕ್ಕಳ ಕೈಚಳಕದಲ್ಲಿ ತಯಾರಾಗ್ತಿದೆ ಅಗರಬತ್ತಿ - ತ್ಯಾಜ್ಯ ಹೂಗಳಿಂದ ಸಿದ್ಧವಾಗ್ತಿದೆ ಊದುಕಡ್ಡಿ

ಮಂಗಳೂರು : ಎಲ್ಲವೂ ಸರಿಯಿದ್ದರೂ ಕೆಲವೊಬ್ಬರು ಏನೂ ಕೆಲಸ ಮಾಡದೆ ತಿರುಗಾಡುತ್ತಿದ್ದಾರೆ. ಆದರೆ ಈ ದೇವರ ಮಕ್ಕಳು ಮಾತ್ರ ತಾವ್ಯಾರಿಗೂ ಕಡಿಮೆಯಿಲ್ಲ ಎಂಬಂತೆ ತ್ಯಾಜ್ಯಹೂಗಳಿಂದಲೇ ಊದುಬತ್ತಿ ತಯಾರಿಸುತ್ತಿದ್ದಾರೆ.

ಹೇಳಿಕೇಳಿ ಇವರು ವಿಶೇಷ ಚೇತನರು. ಮಂಗಳೂರಿನ ಶಕ್ತಿನಗರದ ಸಾನಿಧ್ಯ ವಿಶೇಷ ಮಕ್ಕಳ ವಸತಿಶಾಲೆಯ ವಿದ್ಯಾರ್ಥಿಗಳಾದ ಇವರು ವೇಸ್ಟ್ ಹೂಗಳಿಂದಲೇ ಅಗರಬತ್ತಿ ತಯಾರಿಸುತ್ತಿದ್ದಾರೆ. ಇಲ್ಲಿನ 20ವಿದ್ಯಾರ್ಥಿಗಳು ಅಗರಬತ್ತಿ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಊದುಬತ್ತಿ ತಯಾರಿಯಲ್ಲಿ ತೊಡಗಿರುವವರು 21ವರ್ಷ ಮೇಲ್ಪಟ್ಟ ವಿಶೇಷ ಚೇತನರು. ಸಾನಿಧ್ಯದ ನಾಲ್ವರು ಶಿಕ್ಷಕರಿಗೆ ಬೆಂಗಳೂರಿನ ಕ್ರಾಫ್ಟಿಂಜನ್ ಫೌಂಡೇಶನ್‌ನಿಂದ ಊದುಬತ್ತಿ ತಯಾರಿಯ ತರಬೇತಿ ದೊರಕಿತ್ತು. ಕಳೆದ ಮೂರು ತಿಂಗಳಿನಿಂದ ಈ ಶಿಕ್ಷಕರು ವಿಶೇಷ ಚೇತನ ಮಕ್ಕಳನ್ನು ಊದುಬತ್ತಿ ತಯಾರಿಕೆಯಲ್ಲಿ ತೊಡಗಿಸುತ್ತಿದ್ದಾರೆ.

ಹೂವಿನ ದಳಗಳನ್ನು ಹುಡಿ ಮಾಡಿ ಅಗರಬತ್ತಿ ತಯಾರಿ ನಡೆಯುತ್ತಿದೆ. ಇದಕ್ಕಾಗಿ ಸಾನಿಧ್ಯ ವಸತಿ ಶಾಲೆಯು ದೇವಸ್ಥಾನ, ಸಮಾರಂಭ, ಮಾರ್ಕೆಟ್‌ಗಳಲ್ಲಿ ಬಳಸಿದ ಮತ್ತು ಉಳಿದ ಹೂವನ್ನು ಸಂಗ್ರಹಿಸುತ್ತಿದೆ. ಇದರಲ್ಲಿ ಚೆಂಡು ಹೂ, ಸೇವಂತಿಗೆ, ಜೀನಿಯಾ ಹೂಗಳನ್ನು ಪ್ರತ್ಯೇಕಿಸಿ ಎಸಳುಗಳನ್ನು ಸಂಗ್ರಹಿಸುತ್ತಾರೆ. ಈ ಎಸಳುಗಳನ್ನು ವಾರದವರೆಗೆ ನೆರಳಿನಲ್ಲಿ ಒಣಗಿಸಲಾಗುತ್ತದೆ. ಬಳಿಕ ಎಸಳುಗಳನ್ನು ಯಂತ್ರದಲ್ಲಿ ಹುಡಿಗೊಳಿಸಿ ಫ್ರಿಮಿಕ್ಸ್‌ನೊಂದಿಗೆ ಸೇರಿಸಿ ಎಸೆನ್ಸ್, ನೀರು ಹಾಕಿ ಅಂಟು ಮಾಡಲಾಗುತ್ತದೆ.

ಈ ಅಂಟನ್ನು ಊದುಕಡ್ಡಿಯೊಂದಿಗೆ ಯಂತ್ರಕ್ಕೆ ಹಾಕಲಾಗುತ್ತದೆ. ಕಾಲಿನಿಂದ ಯಂತ್ರದ ಪೆಡಲ್‌ಅನ್ನು ಬಲವಾಗಿ ಅದುಮಿದಂತೆ ಯಂತ್ರದಿಂದ ಊದುಬತ್ತಿ ರೆಡಿಯಾಗಿ ಬರುತ್ತದೆ‌. ಸಿದ್ಧ ಊದುಬತ್ತಿ ಒಣಗಿದ ಬಳಿಕ ಅದನ್ನು ಪ್ಯಾಕ್ ಮಾಡಲಾಗುತ್ತದೆ. ಬೆಂಗಳೂರು ಕೇಂದ್ರದಿಂದ ಇಲ್ಲಿನ 2,500 ಅಗರಬತ್ತಿಗಳಿಗೆ ಆರ್ಡರ್ ಬಂದಿದೆ. ಮುಂದಕ್ಕೆ ಇನ್ನಷ್ಟು ಆರ್ಡರ್‌ ದೊರಕುವ ಸಾಧ್ಯತೆಯಿದೆ. ಒಟ್ಟಿನಲ್ಲಿ ಊದುಬತ್ತಿ ಮಾಡುವ ಕಾಯಕದಲ್ಲಿ ಪರಿಣತಿ ಹೊಂದಿದ ವಿಶೇಷ ಚೇತನರು, ದುಡಿಮೆ ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ವಿಶೇಷ ವರದಿ: ವಿಶ್ವನಾಥ ಪಂಜಿಮೊಗರು

ಪಬ್ಲಿಕ್ ನೆಕ್ಸ್ಟ್ ಮಂಗಳೂರು

Edited By : Manjunath H D
PublicNext

PublicNext

20/11/2024 12:17 pm

Cinque Terre

41.1 K

Cinque Terre

0

ಸಂಬಂಧಿತ ಸುದ್ದಿ