ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಬಸ್ ನಿಲ್ದಾಣದ ಸಮೀಪದ ಆರಾರ್ ಟವರ್ಸ್ ಬಳಿ ಮೀನಿನ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು ಚಾಲಕ ಪವಾಡ ಸದೃಶ ಪಾರಾಗಿದ್ದಾನೆ.
ಮಲ್ಪೆಯಿಂದ ಕೇರಳದ ಕಡೆಗೆ ಹೋಗುತ್ತಿದ್ದ ಮೀನಿನ ಲಾರಿ ಮುಲ್ಕಿ ಬಸ್ ನಿಲ್ದಾಣ ಸಮೀಪಿಸುತ್ತಿದ್ದಂತೆ. ಭಾರೀ ಮಳೆಗೆ ಹೆದ್ದಾರಿಯಲ್ಲಿ ನೀರು ಹರಿದು ಆಳ ತಿಳಿಯದೆ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ಸಂದರ್ಭ ಚಾಲಕ ಹೆಜ್ಮಾಡಿ ನಿವಾಸಿ ಲಾರಿಯಿಂದ ಹಾರಿ ಅಲ್ಪ ಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದಾನೆ.
ಕೂಡಲೇ ಸ್ಥಳಕ್ಕೆ ಧಾವಿಸಿದ ಸುರಭಿ ಎಲೆಕ್ಟ್ರಾನಿಕ್ ಅಂಗಡಿಯ ಮಾಲೀಕ ಜಾನ್ ಕ್ವಾಡ್ರಸ್ ಹಾಗೂ ಸಾಮಾಜಿಕ ಕಾರ್ಯಕರ್ತ ಸಂತೋಷ್ ದೇವಾಡಿಗ ಅಂಗರಗುಡ್ಡೆ ಮತ್ತಿತರರು ಸೇರಿ ಕ್ರೇನ್ ಮೂಲಕ ಲಾರಿಯನ್ನು ಮೇಲೆತ್ತಲು ಸಹಕರಿಸಿದ್ದಾರೆ. ಮುಲ್ಕಿ ಪರಿಸರದಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುತ್ತಿದ್ದು, ವಿದ್ಯುತ್ ಅಸ್ತವ್ಯಸ್ತಗೊಂಡಿದೆ. ಗ್ರಾಮೀಣ ಪ್ರದೇಶದಲ್ಲಿ ಕೃಷಿಗೆ ಪೂರಕವಾಗಿ ಅಂತರ್ಜಲ ಹೆಚ್ಚಿಸಲು ಅಣೆಕಟ್ಟುವಿಗೆ ಹಾಗೆ ಹಾಕಿದ್ದು ಭಾರೀ ಮಳೆಗೆ ನೆರೆ ಭೀತಿ ಎದುರಾಗಿದೆ.
PublicNext
02/12/2024 10:00 pm