ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಲ್ಪೆ: ಚಂಡಮಾರುತ ಪರಿಣಾಮ ಅಲೆಗಳ ತೀವ್ರತೆ- ಆದರೆ ಕರಾವಳಿಯಲ್ಲಿ ಮಳೆ ಇಲ್ಲ

ಮಲ್ಪೆ: ಫೆಂಗಲ್ ಚಂಡಮಾರುತ ಪೂರ್ವ ಕರಾವಳಿಯ ಜನರನ್ನು ತತ್ತರಿಸಿ ಹೋಗುವಂತೆ ಮಾಡಿದೆ. ಪಶ್ಚಿಮ ಕರಾವಳಿಯಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಚಂಡಮಾರುತದ ಪರೋಕ್ಷ ಪರಿಣಾಮಗಳು ಉಡುಪಿ ಜಿಲ್ಲೆಯ ಕಡಲ ತೀರಗಳಲ್ಲೂ ಕಂಡುಬರುತ್ತಿವೆ. ಮಾಮೂಲಿಗಿಂತ ಅಲೆಗಳ ತೀವ್ರತೆ ಜೋರಾಗಿದೆ ಮತ್ತು ವಾತಾವರಣದಲ್ಲಿ ಚಳಿ ಉಂಟಾಗಿದೆ.

ಸದ್ಯ ಕರ್ನಾಟಕ ಕರಾವಳಿಗೂ ಹವಾಮಾನ ವೈಪರೀತ್ಯದ ಭೀತಿ ಎದುರಾಗಿದ್ದು,ಕಡಲ ತೀರದಲ್ಲಿ ಅಲೆಗಳ ತೀವ್ರತೆ ಹೆಚ್ಚಿದೆ. ಮಲ್ಪೆ ಸಮುದ್ರದಲ್ಲಿ ಎಂದಿಗಿಂತಲೂ ಅಲೆಗಳ ಅಬ್ಬರ ಜೋರಾಗಿದೆ. ಈ ಹಿನ್ನೆಲೆಯಲ್ಲಿ ನಾಡದೋಣಿ ಮೀನುಗಾರರು ಕಡಲಿಗೆ ಇಳಿದಿಲ್ಲ. ಆದರೆ, ಆಳಸಮುದ್ರ ಮೀನುಗಾರಿಕೆ ಎಂದಿನಂತೆ ಮುಂದುವರೆದಿದೆ.

ಚಂಡಮಾರುತ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯಿಂದ ಯಾವುದೇ ವಿಶೇಷ ಮುನ್ನೆಚ್ಚರಿಕೆ ನೀಡಲಾಗಿಲ್ಲ. ಒಂದು ವೇಳೆ ಚಂಡಮಾರುತದ ದಿಕ್ಕು ಬದಲಾದರೆ ಕಟ್ಟೆಚ್ಚರ ಅನಿವಾರ್ಯವಾಗಲಿದೆ.

Edited By : Somashekar
Kshetra Samachara

Kshetra Samachara

02/12/2024 05:49 pm

Cinque Terre

5.54 K

Cinque Terre

0

ಸಂಬಂಧಿತ ಸುದ್ದಿ