ಬೈಂದೂರು: ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರದ ಕುಂದಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ತ್ರಾಸಿ ಬೀಚ್ ಫೆಂಗಲ್ ಚಂಡಮಾರುತ ಎಫೆಕ್ಟ್ ನಿಂದಾಗಿ ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿದೆ.
ವಿಶ್ವ ಪ್ರಸಿದ್ಧ ತ್ರಾಸಿ ಬೀಚಿಗೆ ದೇಶ ವಿದೇಶಗಳಿಂದ ಹಾಗೂ ರಾಜ್ಯ ಹೊರ ರಾಜ್ಯಗಳಿಂದ ಪ್ರವಾಸಿಗರನ್ನು ಕೈಬೀಸಿ ಕರೆಯುವ ವಿಶ್ವ ಪ್ರಸಿದ್ಧ ಪ್ರವಾಸಿ ತಾಣ ಇದಾಗಿದೆ. ದಿನನಿತ್ಯ ತ್ರಾಸಿ ಬೀಚಿನ ಸೌಂದರ್ಯ ನೋಡಲು ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿ ಎಂಜಾಯ್ ಮಾಡುತ್ತಿದ್ದರು. ಆದರೆ ಇಂದು ಫೆಂಗಲ್ ಚಂಡಮಾರುತ ಎಫೆಕ್ಟ್ ನಿಂದ ತ್ರಾಸಿ ಬೀಚ್ ಬಿಕೋ ಎನ್ನುತ್ತಿದೆ.
ಒಂದು ಕಡೆ ಸಮುದ್ರ, ಇನ್ನೊಂದು ಕಡೆ ನದಿ ಇರುವ ದೇಶದ ಏಕೈಕ ಪ್ರವಾಸಿ ತಾಣ ತ್ರಾಸಿ ಬೀಚ್. ಹೀಗಾಗಿ ಪ್ರವಾಸೋದ್ಯಮ ಇತ್ತೀಚಿನ ದಿನಗಳಲ್ಲಿ ಬೀಟ್ ಅಭಿವೃದ್ಧಿಗಾಗಿ ಹಾಗೂ ಪ್ರವಾಸಿಗರ ಕ್ಷೇಮಭಿವೃದ್ಧಿಗಾಗಿ, ಕರಾವಳಿ ಪೊಲೀಸ್ ಪಡೆ, ಹೋಂ ಗಾರ್ಡ್, ಲೈಫ್ ಗಾರ್ಡ್, ಕರಾವಳಿ ನಿಯಂತ್ರಣ ಪಡೆ, ಟೂರಿಸಂ ರಕ್ಷಕ ದಳ, ದವರನ್ನು ನಿಯೋಜಿಸಲಾಗಿದೆ.
ತ್ರಾಸಿ ಬೀಚಿನಲ್ಲಿ ಪ್ರವಾಸಿಗರ ಮೋಜು ಮಸ್ತಿಗಾಗಿ ವಾಟರ್ ಸ್ಪೋರ್ಟ್ಸ್, ವಿಶಾಲವಾದ ಪಾರ್ಕಿಂಗ್ ಸೈ ಡೈನಿಂಗ್ (ಗಗನದಲ್ಲಿ ಊಟ) ಆರಂಭಗೊಂಡಿದೆ. ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ಪ್ರವಾಸಿ ತಾಣ ಇಂದು ಮಾತ್ರ ಫೆಂಗಲ್ ಚಂಡಮಾರುತ ಎಫೆಕ್ಟ್ ನಿಂದ ತ್ರಾಸಿ ಬೀಚ್ ಬಿಕೋ ಎನ್ನುತ್ತಿದೆ.
ವರದಿ: ದಾಮೋದರ ಮೊಗವೀರ ನಾಯಕವಾಡಿ ಪಬ್ಲಿಕ್ ನೆಕ್ಸ್ಟ್ ಬೈಂದೂರು.
Kshetra Samachara
03/12/2024 06:15 pm