ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ಅಕ್ರಮವಾಗಿ ಕೆಂಪು ಕಲ್ಲು ಸಾಗಾಟ ಮಾಡುತ್ತಿದ್ದ ಟಿಪ್ಪರ್ ಗಂಗೊಳ್ಳಿ ಪೊಲೀಸ್ ವಶಕ್ಕೆ

ಬೈಂದೂರು: ಪರವಾನಿಗೆ ಇಲ್ಲದೆ ಮಿನಿ ಟಿಪ್ಪರ್ ಲಾರಿಯಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಕೆಂಪು ಕಲ್ಲುಗಳನ್ನು ಗಂಗೊಳ್ಳಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಗಂಗೊಳ್ಳಿ ಪೊಲೀಸ್‌ ಠಾಣೆಯ ಉಪನಿರೀಕ್ಷಕ ಬಸವರಾಜ್ ಕನಶೆಟ್ಟಿ ಅವರು ಸಿಬ್ಬಂದಿಗಳೊಂದಿಗೆ ಆಲೂರು ಗ್ರಾಮದಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಆಲೂರು ಕಡೆಯಿಂದ ಹರ್ಕೂರು ಕಡೆಗೆ ಬರುವ ರಸ್ತೆಯ ಕೊಪ್ಪಟ್ಟೆ ಎಂಬಲ್ಲಿ ಮಿನಿ ಟಿಪ್ಪರ್ ನಲ್ಲಿ ಕೆಂಪು ಕಲ್ಲುಗಳನ್ನು ತುಂಬಿಸಿಕೊಂಡು ಬರುತ್ತಿರುವದನ್ನು ನಿಲ್ಲಿಸಿ ಪರೀಶಿಲಿಸಿದಾಗ ಅಕ್ರಮವಾಗಿ ಸಾಗಾಟದ ಮಾಡುತ್ತಿದ್ದ ಕೆಂಪು ಕಲ್ಲು ಪತ್ತೆಯಾಗಿದೆ. ಮಿನಿ ಟಿಪ್ಪರ್ ಚಾಲಕ ಮೋಹನ ಪೂಜಾರಿ ಹಾಗೂ ಟಿಪ್ಪರ್ ಮಾಲೀಕ ರಾಜು ಕುಲಾಲ್ ಎಂಬುವರ ಮೇಲೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : PublicNext Desk
Kshetra Samachara

Kshetra Samachara

04/12/2024 03:52 pm

Cinque Terre

638

Cinque Terre

0

ಸಂಬಂಧಿತ ಸುದ್ದಿ