ಕೋಲಾರ : ರಾಜ್ಯದ ಕಾಂಗ್ರೆಸ್ ಸರ್ಕಾರ ಮನೆಯ ಹೆಣ್ಣು ಮಕ್ಕಳಿಗೆ 2000 ಸಾವಿರ ಕೊಟ್ಟು ಕುಟುಂಬದ 2 ಎಕರೆ ಜಮೀನು ಕಿತ್ತುಕೊಳ್ಳುತ್ತಿದೆ ಎಂದು ಮಾಜಿ ಸಂಸದ ಎಸ್ ಮುನಿಸ್ವಾಮಿ ಅವರು ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಉಚಿತವಾಗಿ ಅಕ್ಕಿ ನಾವೇ ಕೊಟ್ಟಿದ್ದು ಅಂತ ಕಾಂಗ್ರೆಸ್ ನವರು ಇದುವರೆಗೂ ಹೇಳುತ್ತಿದ್ದರು. ಆದರೆ ಈಗ 12 ಲಕ್ಷಕ್ಕೂ ಅಧಿಕ ಪಡಿತರ ಚೀಟಿ ಕಾರ್ಡ್ ಗಳನ್ನು ರದ್ದುಮಾಡಿ ಕೊಡುತ್ತಿದ್ದು ಅಕ್ಕಿ ಕಿತ್ತುಕೊಂಡಿದ್ದಾರೆ ಎಂದು ಟೀಕಿಸಿದರು.
ರಾಜ್ಯ ಸರ್ಕಾರ ದಿವಾಳಿಯಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಒಂದು ಲಕ್ಷ ಕೋಟಿಗೂ ಅಧಿಕ ಸಾಲ ಮಾಡಲಾಗಿದೆ. ಹಿಂದೂ ವಿರೋಧಿ ನೀತಿ ಅನುಸರಿಸುತ್ತಿರುವ ಸಿದ್ದರಾಮಯ್ಯ ಸರ್ಕಾರದಲ್ಲಿ ನೌಕರರಿಗೆ ಸಂಬಳ ಕೊಡಲು ಹಣವಿಲ್ಲ. ಸಿದ್ದರಾಮಯ್ಯ ಒಂದು ದಿನವೂ ಅಧಿಕಾರದಲ್ಲಿ ಇರೋದಕ್ಕೆ ನಾಲಾಯಕ್ ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
PublicNext
19/11/2024 03:40 pm