ಕೋಲಾರ - ಕೋಲಾರದ ವೇಮಗಲ್ ಬಳಿ ಕುರಿ ಗಾಹಿಯ ಹತ್ಯೆಯನ್ನು ಮಾಡಲಾಗಿದೆ. ಕೋಲಾರ ತಾಲೂಕಿನ ವೇಮಗಲ್ ಹೋಬಳಿಯ ಚನ್ನಸಂದ್ರ ಗ್ರಾಮದ ಬೆಳ್ಳಳ್ಳಿ ರಸ್ತೆಯ ಹರೀಶ್ ಲೇಔಟ್ ಪಕ್ಕದಲ್ಲಿ ತಳಾರಿ ನಾಗರಾಜ್ (45) ಎಂಬುವವರನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ಸುಮಾರು 30 ವರ್ಷಗಳಿಂದ ಚನ್ನಸಂದ್ರ ಗ್ರಾಮದಲ್ಲಿ ವಾಸಿಸುತ್ತಿದ್ದ ತಳಾರಿ ನಾಗರಾಜ್ ಅವರ ಮೂಲ ಸ್ಥಳ ಶಿಡ್ಲಘಟ್ಟ ತಾಲೂಕಿನ ಸಾದಲಿ ಗ್ರಾಮ.
ನಾಗರಾಜ್ ಪ್ರತಿದಿನ ಕುರಿ ಮೇಯಿಸಲು ಬಯಲು ಪ್ರದೇಶಗಳಿಗೆ ಹೋಗುತ್ತಿದ್ದರು. ಕುರಿ ಮೇಯಿಸಲು ಹೋಗುತ್ತಿದ್ದ ಸಂದರ್ಭದಲ್ಲಿ 1ಲಕ್ಷ ರೂ ಹಣ ಇರುತ್ತಿತ್ತು. ಇದೇ ಕಾರಣಕ್ಕೆ ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಎಸ್‌ಪಿ ನಿಖಿಲ್ ಭೇಟಿ ನೀಡಿ ಪರಿಶೀಲಿಸಿದರು. ಆರೋಪಿಗಳ ಪತ್ತೆಗೆ ವೇಮಗಲ್ ಪೊಲೀಸರು ಬಲೆ ಬೀಸಿದ್ದಾರೆ.
PublicNext
03/12/2024 07:48 pm