ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ: ಪಂಚ ಗ್ಯಾರಂಟಿ ಯೋಜನೆಗಳನ್ನು ನೋಡಿ ಮತ ಹಾಕಿದ್ದಾರೆ - ಸಚಿವ ಮು‌ನಿಯಪ್ಪ

ಕೋಲಾರ: ಚನ್ನಪಟ್ಟಣ, ಸಂಡೂರು ಹಾಗೂ ಶಿಗ್ಗಾವಿಯ ಉಪಚುನಾವಣೆಯಲ್ಲಿ ಮೂರುಕ್ಕೆ ಮೂರು ಕ್ಷೇತ್ರಗಳಲ್ಲೂ ಗೆಲ್ಲುತ್ತೆವೆ ಎಂದು ಮೊದಲೇ ಹೇಳಿದ್ದೆ. ಜನ ಕಾಂಗ್ರೆಸ್ ಪರವಾಗಿ ಇದ್ದಾರೆ ಎಂದು ಆಹಾರ ಸಚಿವ ಕೆಹೆಚ್ ಮುನಿಯಪ್ಪ‌ ಹೇಳಿದರು.

ನಗರದ ಸಾಯಿಬಾಬಾ ದೇವಸ್ಥಾನಕ್ಕೆ ಭೇಟಿ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು, ನಮ್ಮ‌ ಸರ್ಕಾರ ಹಾಗೂ ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿ- ಜೆಡಿಎಸ್ ನವರು ಎಷ್ಟಿ ಬೊಬ್ಬೆ ಹೊಡೆದು ಅಪಪ್ರಚಾರ ಮಾಡಿದರು ಜನರು ನಮ್ಮ ಪಂಚ ಗ್ಯಾರಂಟಿಗಳನ್ನು ನೋಡಿ ಮತ ಹಾಕಿದ್ದಾರೆ. ಗ್ಯಾರಂಟಿಗಳಿಂದ ನಮಗೆ ಆಶೀರ್ವಾದ ಮಾಡಿದ್ದಾರೆ. ಜನ ನಮ್ಮ‌ ಸರ್ಕಾರದ ಜನಪರ ಅಭಿವೃದ್ಧಿ ಕೆಲಸಗಳನ್ನು ನೋಡಿ ಮತ‌ ಕೊಟ್ಟಿದ್ದಾರೆ. ವಿಪಕ್ಷ ಸ್ಥಾನದಲ್ಲಿದ್ದುಕೊಂಡು ಅವರು ರಾಜಕೀಯವಾಗಿ ಸುಮ್ಮನೆ ಟೀಕಿಸುವು ಬದಲು ಸಲಹೆಗಳನ್ನು ನೀಡಬೇಕಿತ್ತು. ಅದು ಬಿಟ್ಟು ಬೇರೆ ಬೇರೆ ಮಾತನಾಡುತ್ತಾರೆ.ಹೀಗಾಗಿ ಜನ ನಮ್ಮ‌ ಪರವಾಗಿ ಇದ್ದಾರೆ‌ ಎಂದು ಹೇಳಿದರು.

Edited By : PublicNext Desk
PublicNext

PublicNext

23/11/2024 07:34 pm

Cinque Terre

18.97 K

Cinque Terre

0

ಸಂಬಂಧಿತ ಸುದ್ದಿ