ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ: ಕ್ಷಯ ರೋಗ ನಿರ್ಮೂಲನೆಗೆ ಜನರಲ್ಲಿ ಅರಿವು ಮೂಡಿಸಿ-ಜಿಲ್ಲಾಧಿಕಾರಿ ಅಕ್ರಂ ಪಾಷ

ಕೋಲಾರ: ಗೃಹ ಆರೋಗ್ಯ ಯೋಜನೆಯ ಸಹಯೋಗದಿಂದ ಕ್ಷಯರೋಗವನ್ನು ಪತ್ತೆ ಹಚ್ಚಿ ಅದಕ್ಕೆ ತ್ವರಿತ ಗತಿಯಲ್ಲಿ ಚಿಕಿತ್ಸೆ ನೀಡಬೇಕು. ಜಿಲ್ಲೆಯ ಎಲ್ಲಾ ಕಡೆಗಳಲ್ಲಿ ಅರಿವು ಕಾರ್ಯಕ್ರಮ ಹಾಗೂ ವ್ಯಾಪಕವಾಗಿ ಪ್ರಚಾರವನ್ನು ಮಾಡಿ ಜನರಲ್ಲಿ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಅಕ್ರಂ ಪಾಷ ಅವರು ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವನ್ ಸಭಾಂಗಣದಲ್ಲಿ ಎನ್.ಟಿ.ಇ.ಪಿ 100 ದಿನಗಳ ಶಿಬಿರದ ಕುರಿತು ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಕ್ಷಯ ರೋಗವನ್ನು ಪತ್ತೆಹಚ್ಚಲು ತರಬೇತಿಗಳನ್ನು ನೀಡಬೇಕು. ಸುಮಾರು 55 ವರ್ಷ ವಯಸ್ಸಿನವರನ್ನು ಸಕ್ಕರೆ ಕಾಯಿಲೆ ಇರುವವರನ್ನು, ಏಡ್ಸ್ ರೋಗಿಗಳನ್ನು, ಧೂಮಪಾನ, ಮಧ್ಯಪಾನ ಮಾಡುವವರನ್ನು ಹಾಗೂ ಹೆಚ್ಚು ಜನ ಸಮೂಹ ಸೇರುವ ಸ್ಥಳಗಳಲ್ಲಿ ಕ್ಷಯ ರೋಗ ಪತ್ತೆ ಹಚ್ಚುವ ಪರೀಕ್ಷೆಗಳನ್ನು ಮಾಡಬೇಕು ಎಂದರು. ರೋಗಿಗಳ ಗುಣಲಕ್ಷಣಗಳ ಆಧಾರದ ಮೇಲೆ ಆಯುಷ್ಮಾನ್ ಆರೋಗ್ಯ ಕೇಂದ್ರಕ್ಕೆ ಸೇರಿಸಿಕೊಳ್ಳುವುದು, ಇಲ್ಲದಿದ್ದರೆ ಅವರವರ ಸ್ವಂತ ಮನೆಯಲ್ಲಿಯೇ ಚಿಕಿತ್ಸೆ ನೀಡಬೇಕು ಎಂಬ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದು ತಿಳಿಸಿದರು.

Edited By : PublicNext Desk
Kshetra Samachara

Kshetra Samachara

03/12/2024 04:19 pm

Cinque Terre

380

Cinque Terre

0

ಸಂಬಂಧಿತ ಸುದ್ದಿ