ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ - ಚಿನ್ಮಯಾನಂದ ಅವಧೂತ ಸ್ವಾಮೀಜಿಯನ್ನು ಹತ್ಯೆ ಮಾಡಿರುವ ಆರೋಪಿಗಳಿಗೆ ಶಿಕ್ಷೆ ವಿಧಿಸಿ - ಆಂಜನಪ್ಪ

Avb

Headline

ಕೋಲಾರ - ಚಿನ್ಮಯಾನಂದ ಅವಧೂತ ಸ್ವಾಮೀಜಿಯನ್ನು ಹತ್ಯೆ ಮಾಡಿರುವ ಆರೋಪಿಗಳಿಗೆ ಶಿಕ್ಷೆ ವಿಧಿಸಿ - ಆಂಜನಪ್ಪ

ಕೋಲಾರ : ಮಾಲೂರು ತಾಲೂಕಿನ ಆನಂದ ಮಾರ್ಗ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆಚಾರ್ಯ ಚಿನ್ಮಯಾನಂದ ಅವಧೂತ ಸ್ವಾಮೀಜಿ ರನ್ನು ಹತ್ಯೆ ಮಾಡಿರುವ ಆರೋಪಿಗಳಿಗೆ, ನ್ಯಾಯಾಲಯ ಜಾಮೀನನ್ನು ನೀಡದಂತೆ, ನಗರದ ಹೊರ ವಲಯದ ಜಿಲ್ಲಾಧಿಕಾರಿಗಳ ಕಚೇರಿ ಆವರಣ ಮಂದೆ ಆನಂದ ಮಾರ್ಗ ಪ್ರಚಾರ ಸಂಘ ಸ್ವಾಮೀಜಿಗಳು ಹಾಗೂ ಮಹಿಳೆಯರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಆನಂದ್ ಮಾರ್ಗ ಪಾಲಿಟೆಕ್ನಿಕ್ ಪ್ರಚಾರಕ ಸಂಘ ಕಚೇರಿಯ ಆನಂದ ಮಾತನಾಡಿ, ಮಾಲೂರಿನ ಆನಂದ ಮಾರ್ಗ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ಕಳೆದ ಕೆಲ ತಿಂಗಳ ಹಿಂದೆ ನಡೆದ ಚಿನ್ಮಯಾನಂದ ಅವಧೂತ ಸ್ವಾಮೀಜಿ ಅವರನ್ನು ಹತ್ಯೆ

ಮಾಡಿರುವ ಆರೋಪಿಗಳಿಗೆ ನ್ಯಾಯಾಲಯವು ಜಾಮೀನನ್ನು ನೀಡದೆ, ಆರೋಪಿಗಳಿಗೆ ಕಠಿಣ ಶಿಕ್ಷೆಯನ್ನು ವಿಧಿಸಬೇಕು ಎಂದು ಮನವಿ ಮಾಡಿದರು.

ಸ್ವಾಮೀಜಿ ಹತ್ಯೆಯ ಪ್ರಕರಣದಲ್ಲಿ ಪ್ರಮುಖ ಆರೋಪಿ ಅರುಣ್ ಆಗಿದ್ದು, ಇನ್ನೂ ಮೂರು ಮಂದಿ ಸೇರಿಕೊಂಡು ಹತ್ಯೆ ಮಾಡಿದ್ದು, ಅತ್ತೆ ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.

Edited By : PublicNext Desk
Kshetra Samachara

Kshetra Samachara

03/12/2024 06:18 pm

Cinque Terre

340

Cinque Terre

0

ಸಂಬಂಧಿತ ಸುದ್ದಿ