ಚಿಕ್ಕಮಗಳೂರು : ಕಾವ್ಯ ಲೋಕದಲ್ಲಿ ಆಳವಾದ ಪಾಂಡಿತ್ಯ ಅವಶ್ಯಕ ಎಂದು ರಾಮನಗರ ಜಿಲ್ಲೆಯ ಕಾವ್ಯ ಸಂಸ್ಕೃತಿ ಯಾನದ ಅಧ್ಯಕ್ಷ ಡಾ.ಬೈರಮಂಡಲ ರಾಮೇಗೌಡ ಹೇಳಿದ್ರು.
ನಗರದ ಆಶಾಕಿರಣ ಪಾಠಶಾಲೆ ಸಮೀಪದ ಕನ್ನಡ ಭವನದಲ್ಲಿ ಬೆಂಗಳೂರು ರಂಗಮಂಡಲ, ಅವಧಿ ಸಂಸ್ಥೆ ಹಾಗೂ ಜಿಲ್ಲಾ ಕಸಾಪ ಸಹಯೋಗದಲ್ಲಿ ಹಮ್ಮಿಕೊಂಡಿದ್ಧ ಕಾವ್ಯ ಸಂಸ್ಕೃತಿ ಯಾನ ಕಾರ್ಯಕ್ರದಲ್ಲಿ ಮಾತನಾಡಿದ ಅವರು ಅಧ್ಯಯನದಿಂದ ಮಾತ್ರ ಸರ್ವಶ್ರೇಷ್ಠ ಕವಿಗಳಾಗಲು ಸಾಧ್ಯ ಎಂದರು. ಚಿಕ್ಕಮಗಳೂರು ಜಗದಕವಿ ಕುವೆಂಪುರವರಿಗೆ ಜನ್ಮವಿತ್ತ ಭೂಮಿ, ಈ ನೆಲದಲ್ಲಿ ಕವಿ ಮನಸ್ಸು ಹೊಂದಿರುವ ಅನೇಕರು ನಿರಂತರ ಕಾವ್ಯ ರಚನೆಯಲ್ಲಿ ತೊಡಗಿದ್ದಾರೆ. ಕವಿತೆಗಳನ್ನು ರಚಿಸುವ ಕಲೆ ಎಲ್ಲರಲ್ಲೂ ಅಡಗಿರತ್ತದೆ. ಅನಾವರಣಗೊಳಿಸುವ ಕಾರ್ಯವಾಗಬೇಕು.
ಆ ನಿಟ್ಟಿನಲ್ಲಿ ರಾಜ್ಯಾದ್ಯಂತ ಕಾವ್ಯ ಸಂಸ್ಕೃತಿ ಯಾನವನ್ನು ಸಂಚರಿಸಿ ಕವಿಗಳನ್ನು ಸಮಾಜದ ಮುಂಚೂಣಿಗೆ ಕರೆ ತರಲು
ಪ್ರಯತ್ನಿಸುತ್ತಿದೆ ಎಂದು ಹೇಳಿದರು. ಇತ್ತೀಚಿನ ದಿನಗಳಲ್ಲಿ ಕವನ ಸಂಕಲನ, ಕಥೆಗಳು, ಕಾವ್ಯ ರಚನೆಗಳನ್ನು ಓದುಗರಿಗೆ ಮೆಚ್ಚಿಸುವಂತಿಲ್ಲ. ಕೇವಲ ಸಾಮಾಜಿಕ ಜಾಲತಾಣದಲ್ಲಿ ಅಂಟಿಸಿ ಮೆಚ್ಚುಗೆ ಹಾಗೂ ಕಾಮೆಂಟ್‌ಗಳಿಗೆ ಮಾತ್ರ ಸೀಮಿತವಾಗುತ್ತಿದೆ. ಇದರಿಂದ ಮೊದಲು ಹೊರಬಂದು ಓದುಗರರು ಮೆಚ್ಚಿಸುವಂತ ರೀತಿಯಲ್ಲಿ ಕಾವ್ಯಗಳನ್ನು ರಚಿಸಬೇಕು ಎಂದು ಕಿವಿಮಾತು ಹೇಳಿದರು.
Kshetra Samachara
18/11/2024 05:53 pm