ಚಿಕ್ಕಮಗಳೂರು: ದಕ್ಷಿಣ ಕಾಶಿ ಕಳಸೇಶ್ವರ ದೇವಸ್ಥಾನದಲ್ಲಿ ಕಳೆದೊಂದು ವಾರದಿಂದ ನಡೆಯುತ್ತಿದ್ದ ಗಿರಿಜಾ ಕಲ್ಯಾಣೋತ್ಸವಕ್ಕೆ ಅದ್ದೂರಿ ತೆರೆ ಬಿದ್ದಿದೆ. ಕೃತಿಕ ದೀಪೋತ್ಸವ, ತ್ರಿಪುರೋತ್ಸವ, ಹರಿಹರ ಸಮಾಗಮದೊಂದಿಗೆ ನಿನ್ನೆ ಬೆಳಿಗ್ಗೆಯಿಂದಲೇ ವಿಶೇಷ ಹೋಮ -ಹವನಗಳು ನಡೆದವು.
ಕಳಸೇಶ್ವರ ಸ್ವಾಮಿಯನ್ನು ದೇವಸ್ಥಾನದಿಂದ ವೈಶಿಷ್ಟ ತೀರ್ಥ ಮತ್ತು ಗಣಪತಿ ಕಟ್ಟೆ ಯ ಮೂಲಕ ವೆಂಕಟರಮಣ ದೇವಸ್ಥಾನದವರೆಗೆ ಮೆರವಣಿಗೆ ನಡೆಸಲಾಯಿತು. ಈ ವೇಳೆ ನೂರಾರು ಭಕ್ತರು ಭಾಗವಹಿಸಿದ್ದರು ಮೆರವಣಿಗೆ ವೇಳೆ ಸಿಡಿಮದ್ದುಗಳ ಪ್ರದರ್ಶನ ನೆರೆದಿದ್ದವರ ಗಮನ ಸೆಳೆಯಿತು. ದಾರಿ ಉದ್ದಕ್ಕೂ ಬಣ್ಣದ ರಂಗೋಲಿಗಳನ್ನು ಬಿಡಿಸಲಾಗಿತ್ತು.
ಒಟ್ಟಾರೆ ಕಳೆದ 8 ದಿನಗಳಿಂದ ಕಳಸದಲ್ಲಿ ನಡೆಯುತ್ತಿದ್ದ ಗಿರಿಜಾ ಕಲ್ಯಾಣೋತ್ಸವಕ್ಕೆ ಅದ್ದೂರಿ ತೆರೆ ಬಿದ್ದಿದ್ದು ಇದೇ ತಿಂಗಳ 30 ರಂದು ಲಕ್ಷ ದೀಪೋತ್ಸವ ನಡೆಯಲಿದೆ.
Kshetra Samachara
18/11/2024 02:51 pm