ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಾರ್ಮಾಡಿ ರಸ್ತೆ ಅಭಿವೃದ್ಧಿಗೆ 375 ಕೋಟಿ ಹಣ ಬಿಡುಗಡೆ ಡಬಲ್ ರಸ್ತೆ ಬಗ್ಗೆ ಅಪಸ್ವರ!

ಚಿಕ್ಕಮಗಳೂರು : ಮಲೆನಾಡು ದಕ್ಷಿಣ ಕನ್ನಡ ಸಂಪರ್ಕಿಸುವ ಚಾರ್ಮಾಡಿ ಘಾಟ್ ನ ಪ್ರಕೃತಿ ಸೌಂದರ್ಯ ನಡುವೆ ಅಂಕುಡೊಂಕಿನ ಕಠಿಣ ಹಾದಿಯಲ್ಲಿ ಸಾಗೋದು ಒಂತರ ವಿಶಿಷ್ಟ ಅನುಭವ. 2019 ರ ನಂತ್ರ ಈ ಘಾಟ್ ಅಂದ್ರೆ ಜನ ಭಯ ಬಿಳ್ತಾರೇ ಜಲಸ್ಪೋಟಕ್ಕೆ ಅಕ್ಷರಶಃ ನಲುಗಿತ್ತು. ಅಂದಿನಿಂದ ಮಳೆಗಾಲದಲ್ಲಿ ಘಾಟ್ ಅಂದ್ರೆ ಯಾವಾಗ ಬಂದ್ ಅಗುತ್ತೋ ಎಲ್ಲಿ ಕುಸಿಯುತ್ತೋ ಅನ್ನೋ ಭೀತಿಯೇ ಸ್ಥಳೀಯರಲ್ಲಿತ್ತು.

ಆ ಜಲಸ್ಪೋಟದಿಂದ ದಕ್ಷಿಣ ಕನ್ನಡ ಚಿಕ್ಕಮಗಳೂರು ಸಂಪರ್ಕವೇ ಅಸ್ತವ್ಯಸ್ತವಾಗಿತ್ತು. ಚಿಕ್ಕಮಗಳೂರಿಗರಿಗೆ ಈ ಘಾಟ್ ಎಷ್ಡು ಅವಶ್ಯಕ ಅಂದ್ರೆ ರಸ್ತೆ ಕೊಂಚ ಬಂದ್ ಅದ್ರೂ ನಿತ್ಯದ ಜೀವನವೇ ಸಮಸ್ಯೆಗೆ ಸಿಲುಕುವಂತಾಗುತ್ತೇ‌‌. ಈಗ ದಕ್ಷಿಣ ಕನ್ನಡ ಸಂಸದ ಬ್ರಿಷೇಶ್ ಚೌಟ ನೀಡಿರುವ ಹೇಳಿಕೆಯೊಂದು ಭಾರಿ ಚರ್ಚೆಗೆ ಗ್ರಾಸವಾಗಿದೆ. ಅದು 375 ಕೋಟಿ ಅನುದಾನದಲ್ಲಿ ದ್ವಿಪಥ ರಸ್ತೆ ಮಾಡಲಾಗುತ್ತೇ ಅಂತಾ. ದ್ವಿಪಥ ರಸ್ತೆ ಅಂದ ತಕ್ಷಣವೇ ಕಾಫಿ ನಾಡಿನ ಕೊಟ್ಟಿಗೆಹಾರ ಸುತ್ತಮುತ್ತ ಮೂಡಿಗೆರೆ ತಾಲೂಕಿನಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಪರಿಸರ ಸೂಕ್ಷ್ಮ ಪ್ರದೇಶದ ಜೊತೆಗೆ ಶೋಲಾ ಅರಣ್ಯವನ್ನು ಹೊಂದಿರುವ ಪ್ರದೇಶ. ವರ್ಷ ಪೂರ್ತಿ ಹಚ್ಚ ಹಸಿರನ ವಾತಾವರಣದಿಂದ ಇರುವ ಪ್ರದೇಶದಲ್ಲಿ ರಸ್ತೆ ಅಭಿವೃದ್ದಿ ಪಡೆಸುವ ಮೂಲಕ ಸರ್ಕಾರ ಪರಿಸರಕ್ಕೆ ದಕ್ಕೆ ತರುವ ಯತ್ನ ನಡೆಸುತ್ತಿದೆ ಎಂದು ಪರಿಸರವಾದಿಗಳು ಕಿಡಿಕಾರಿದ್ದಾರೆ. ಮತ್ತೊದೆಡೆ ಡಬಲ್ ರೋಡ್ ಮಾಡಲು ಜಾಗಾನೇ ಇಲ್ಲ, ಸ್ವಲ್ಪ ಜಾಸ್ತಿ ಹಣ ಆದರೂ ಪರವಾಗಿಲ್ಲ ಉತ್ತಮವಾದ ಸುರಂಗ ಮಾರ್ಗನೋ ಅಥವಾ ಫ್ಲೈ ಓವರ್ ರೀತಿಯ ಕ್ರಿಯಾ ಯೋಜನೆ ಮಾಡಿ, ಆಗು ಹೋಗುಗಳ ಬಗ್ಗೆ ಚರ್ಚಿಸಿ ಮತ್ತಷ್ಟು ಹಣ ಸೇರಿಸಿ ಉತ್ತಮವಾದ ರಸ್ತೆ ನಿರ್ಮಿಸಿ ಎನ್ನುವ ಸಲಹೆ ಚಾರ್ಮಾಡಿ ರಸ್ತೆ ಉಳಿಸಿ ಹೋರಾಟ ಸಮಿತಿ ಸಂಚಾಲಕ ಸಂಜಯ್ ಕೊಟ್ಟಿಗೆಹಾರ ಒತ್ತಾಯಿಸಿದ್ದಾರೆ.

Edited By : Shivu K
PublicNext

PublicNext

20/11/2024 02:51 pm

Cinque Terre

17.32 K

Cinque Terre

0

ಸಂಬಂಧಿತ ಸುದ್ದಿ