ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು : ನೂತನ ಸರ್ಕಾರಿ ಶಾಲಾ ಕಟ್ಟಡ ನಿರ್ಮಿಸಲು ಅನುದಾನಕ್ಕೆ ಗ್ರಾಮಸ್ಥರ ಮನವಿ

ಚಿಕ್ಕಮಗಳೂರು : ವಿಪರೀತ ಮಳೆಯಿಂದ ಶಾಲಾ ಕಟ್ಟಡವು ಕುಸಿದಿರುವ ಕಾರಣ ನೂತನ ಕಟ್ಟಡ ನಿರ್ಮಿಸಲು ವಿಶೇಷ ಅನುದಾನ ಒದಗಿಸಿ ಮಕ್ಕಳ ಶ್ರೇಯೋಭಿವೃಧ್ದಿಗೆ ಶ್ರಮಿಸಬೇಕು ಎಂದು ಚಂಡಗೋಡು ಗ್ರಾಮಸ್ಥರು ಬಿಎಸ್ಪಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್‌ಗೆ ಅವರಿಗೆ ಒತ್ತಾಯಿಸಿದರು. ಬಳಿಕ ಮಾತನಾಡಿದ ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ

ಕೆ.ಟಿ.ರಾಧಾಕೃಷ್ಣ ದೊಡ್ಡಮಾಗರವಳ್ಳಿ ಗ್ರಾ. ಪಂ. ವ್ಯಾಪ್ತಿಯ ಚಂಡಗೋಡು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ

ಕಟ್ಟಡ ಅತಿಯಾದ ಮಳೆಯಿಂದ ಶಿಥಿಲಾವಸ್ಥೆ ಹೆಚ್ಚಾಗಿ ಕುಸಿದಿರುವ ಕಾರಣ ವಿದ್ಯಾರ್ಥಿಗಳಿಗೆ ನೂತನ ಕಟ್ಟಡದ ಅವಶ್ಯಕತೆ ಬಹಳಷ್ಟಿದೆ ಎಂದು ಹೇಳಿದರು.

ಶಾಲೆಯ ನೂತನ ಕಟ್ಟಡ ನಿರ್ಮಿಸುವ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರು, ಕಂದಾಯ ಸಚಿವ, ಜಿಲ್ಲಾಧಿಕಾರಿ, ಶಾಸಕರು ಹಾಗೂ ಸಂಬಂಧಿಸಿದ ಅಧಿಕಾರಿಗಳ ವೃಂದ ಚಂಡಗೋಡು ಗ್ರಾಮಕ್ಕೆ ಭೇಟಿ ಸಲ್ಲಿಸಿ ಪರಿಶೀಲನೆ ನಡೆಸಿ ಶಾಲೆಗೆ 45 ಲಕ್ಷ ರೂ.ವೆಚ್ಚದಲ್ಲಿ ಮೂರು ಕೊಠಡಿಗಳನ್ನು ನಿರ್ಮಿಸಿಕೊಡುವ ಭರವಸೆ ವ್ಯಕ್ತಪಡಿಸಿದ್ದರು ಎಂದರು.

Edited By : PublicNext Desk
PublicNext

PublicNext

21/11/2024 02:24 pm

Cinque Terre

13.93 K

Cinque Terre

0

ಸಂಬಂಧಿತ ಸುದ್ದಿ