ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು : ಹಿಂದೂ-ಮುಸ್ಲಿಂ ಕುಂಕುಮ ಗಲಾಟೆ - ಮತ್ತೆ ಮುನ್ನೆಲೆಗೆ ಬಂದ ದತ್ತಪೀಠ ವಿವಾದ !

ಚಿಕ್ಕಮಗಳೂರು : ವಿವಾದಿತ ಐಡಿ ಪೀಠದ ಗರ್ಭಗುಡಿಯ ಗದ್ದುಗೆಗೆ ಕುಂಕುಮ ಹಾಕಿದ ವಿಷಯ ಇದೀಗ ಹೊಸ ಸಮಸ್ಯೆಗೆ ಕಾರಣವಾಗಿದ್ದು, ಜಿಲ್ಲಾಡಳಿತಕ್ಕೆ ತಲೆ ನೋವಾಗಿ ಪರಿಣಮಿಸಿದೆ. ಈ ಬಾರಿಯ ದತ್ತ ಮಾಲೆ ಕೊನೆಯ ದಿನ ದತ್ತ ಪೀಠದಲ್ಲಿ ದರ್ಶನ ಪಡೆದ ಭಕ್ತರು ಹೋದ ನಂತರ ಕುಂಕುಮ ಸುರಿದಿರಬಹುದು ಎನ್ನಲಾಗಿದ್ದು, ನಂತರ ಪ್ರತಿ ದಿನ ಕುಂಕುಮ ಹಾಕಲಾಗಿದೆ ಎಂದು ಕೆಲ ಮುಸ್ಲಿಂ ಯುವಕರು ದತ್ತಪೀಠದಲ್ಲಿ ಪ್ರತಿಭಟನೆ ನಡೆಸಿದ್ದು, ಘಟನಾ ಸ್ಥಳಕ್ಕೆ ಮುಜರಾಯಿ ಇ ಓ ರಂಗಪ್ಪ ಭೇಟಿ ನೀಡಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸುವ ಯತ್ನ ನಡೆಸಿದ್ದಾರೆ. ಆದರೂ ಘಟನೆಯ ನಂತರ ಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದ್ದು, ದತ್ತಪೀಠದಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ಈ ನಡುವೆ ಕುಂಕುಮ ಹಾಕಿದ ಪ್ರಕರಣ ಎಲ್ಲೆಡೆ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಇದು ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ ಎಂಬ ಪ್ರಶ್ನೆ ಮೂಡಿದೆ. ವಿವಾದಿತ ಸ್ಥಳದಲ್ಲಿ ಹೊಸ ಆಚರಣೆ ನಡೆದಿದೆಯೇ ಎಂಬ ಗುಮಾನಿ ಮೂಡಿದ್ದು, ಜಿಲ್ಲಾಡಳಿತ ಇದರ ಬಗ್ಗೆ ಯಾವ ರೀತಿ ಪ್ರತಿಕ್ರಿಯೆ ನೀಡುತ್ತದೆ ಎಂಬುದನ್ನ ಕಾದು ನೋಡಬೇಕಿದೆ. ಇದರ ಜೊತೆಗೆ ಇಂದು ಕೂಡ ಕೆಲ ಮುಸ್ಲಿಂ ಸಂಘಟನೆಗಳು, ಶಾಖಾದ್ರಿ ಕುಟುಂಬಸ್ಥರು ಮತ್ತೆ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಿದ್ದಾರೆ. ಜೊತೆಗೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

21/11/2024 04:55 pm

Cinque Terre

1.16 K

Cinque Terre

0

ಸಂಬಂಧಿತ ಸುದ್ದಿ