ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು : ಮಾಗಲು ಗ್ರಾಮದಲ್ಲಿ ಬಲೀಂದ್ರ ವಿಸರ್ಜನೆ ವಿಶೇಷ ಪೂಜೆ !

ಚಿಕ್ಕಮಗಳೂರು : ಜಿಲ್ಲೆಯ ಮಲೆನಾಡು ಭಾಗದಲ್ಲಿ ದೀಪಾವಳಿ ಕಳೆದ ನಂತರ ಒಂದಷ್ಟು ವಿಶೇಷ ಆಚರಣೆಗಳು ನಡೆಯುತ್ತಿವೆ. ಕಳಸ ತಾಲೂಕಿನ ಮಾಗಲು ಗ್ರಾಮದಲ್ಲಿ 24 ವರ್ಷಗಳ ಬಳಿಕ ದಲಿತ ಸಮುದಾಯದವರು ಬಲೀಂದ್ರರಾಯ ಪೂಜೆ ಆಚರಿಸಿದ್ದಾರೆ. ಗ್ರಾಮದ ಆರಾಧ್ಯ ದೈವ ನೆಲೆಸಿರುವ ಗುಡ್ಡದಲ್ಲಿ ರಾತ್ರಿ 11:30 ರಿಂದ ಶುರುವಾದ ಪೂಜೆ ಬೆಳಗಿನ ಜಾವ 6:00 ಗಂಟೆಗೆ ಬಲಿಂದ್ರರಾಯನನ್ನು ತೆಪ್ಪೋತ್ಸವ ಮೂಲಕ ಭದ್ರಾನದಿಯಲ್ಲಿ ವಿಸರ್ಜನೆ ಮಾಡಿದ್ದಾರೆ.

ಸುಮಾರು 15 ದಿನಗಳ ಕಾಲ ನಡೆದ ವಿಶಿಷ್ಟ ಆಚರಣೆಯಲ್ಲಿ ಗ್ರಾಮದ ಜನರು ಬಲಿಂದ್ರನಿಗೆ ವಿಶೇಷ ಪೂಜೆಗಳನ್ನು ಸಲ್ಲಿಸುವ ಮೂಲಕ ವಿಶೇಷವಾಗಿ ಆಚರಿಸಿದ್ದಾರೆ. ದೀಪಾವಳಿಯ ಮೊದಲ ದಿನ ಭೂಮಿ ಪೂಜೆಯಿಂದ ಪ್ರಾರಂಭವಾಗಿದ್ದ ಹಬ್ಬ ಇಂದು ಬಲಿಂದ್ರನನ್ನು ಭದ್ರಾನದಿಯಲ್ಲಿ ವಿಸರ್ಜನೆ ಮಾಡುವ ಮೂಲಕ ಹಬ್ಬದ ಸಂಭ್ರಮಕ್ಕೆ ತೆರೆದಿದೆ.

Edited By : PublicNext Desk
Kshetra Samachara

Kshetra Samachara

21/11/2024 05:05 pm

Cinque Terre

1.08 K

Cinque Terre

0

ಸಂಬಂಧಿತ ಸುದ್ದಿ