ಚಿಕ್ಕಮಗಳೂರು: ನಗರದ ಕುವೆಂಪು ಕಲಾಮಂದಿರದಲ್ಲಿ ನಡೆದ ಟೌನ್ ಮಹಿಳಾ ಸಂಘದ 99 ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ದಂಪತಿ ಸಹಿತ ಆಗಮಿಸಿದ್ದ ಅರ್ಜುನ್ ಜನ್ಯಾ ತಮ್ಮ ಭಾಷಣದಲ್ಲಿ ಚಿಕ್ಕಮಗಳೂರಿನ ತಮ್ಮ ಕುಟುಂಬದ ನಂಟನ್ನು ನೆನಪಿಸಿಕೊಂಡರು ಅಲ್ಲದೇ ಮಹಿಳೆಗೆ ಸ್ವತಂತ್ರ ನೀಡಬೇಕು ಎಂದು ಪ್ರತಿಪಾದಿಸಿದರು.
ನಗರದ ಯುವ ಸಮೂಹಕ್ಕೆ ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯಾ ಕೆಲಕಾಲ ತಮ್ಮ ಸಂಗೀತ ನಿರ್ದೇಶನ ಹಾಡು ಹೇಳುವ ಮೂಲಕ ರಂಜಿಸಿದರು. ಒಂದು ಮಳೆ ಬಿಲ್ಲು ಒಂದು ಮಳೆ ಮೋಡ, ಹಾಗೂ ಹಂಸ ನಡೆಯೋಳೆ ಮೀನ ಕಣ್ಣೋಳೆ ಸೊಬಗ ಮೈತುಂಬಿದೆ ಹಾಡು ಪ್ರಸ್ತುತ ಪಡಿಸಿದರು.
ಈ ವೇಳೆ ಒನ್ಸ್ ಮೋರ್ ಒನ್ಸ್ ಮೋರ್ ಎಂದು ಕೂಗಿದ ಯುವಕ ಯುವತಿಯರು ಕೂಗಿದ ಹಿನ್ನೆಲೆಯಲ್ಲಿ ಮತ್ತೆ ಎರಡು ಹಾಡುಗಳನ್ನು ಜನ್ಯಾ ಹಾಡಿದರು. ಬ್ರದರ್ ಫ್ರಮ್ ಅನ್ ನದರ್ ಮದರ್ , ಶ್ರೀ ಆಂಜನೇಯಂ ಭಜರಂಗಿ ಚಿತ್ರದ ಗೀತೆಯನ್ನು ಕೂಡಾ ಹಾಡಿದರು.
PublicNext
21/11/2024 07:38 am