ಚಿಕ್ಕಮಗಳೂರು : ಬಣ್ಣದ ಕೋಲುಗಳನ್ನು ಹಿಡಿದು ಹಾಡಿನ ದಾಟಿಗೆ ತಕ್ಕಂತೆ ಗೆಜ್ಜೆ ಕಟ್ಟಿ ಹೆಜ್ಜೆ ಹಾಕುತ್ತಾ ಕೋಲಾಟ ಆಡಿದ್ದು, ಎಲ್ಲರ ಮನ ಕುಣಿವಂತೆ ಮಾಡಿದೆ. ಇಂತಹ ವಿಶಿಷ್ಟ ಕೋಲಾಟ ಕರ್ನಾಟಕದ ಜಾನಪದ ನೃತ್ಯಗಳಲ್ಲಿ ಒಂದಾಗಿದೆ.
ಮಲೆನಾಡಿನ ಸಂಪ್ರದಾಯಗಳಲ್ಲಿ ಕೋಲಾಟ ಸಹ ವಿಶೇಷ ಸ್ಥಾನ ಪಡೆದುಕೊಂಡಿದ್ದು ದೀಪಾವಳಿಯ ನಂತರ ಗ್ರಾಮದ ಪ್ರತಿ ಮನೆಗೂ ಹೋಗಿ ಕೋಲಾಟ ಆಡುವುದು ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ವಿಶೇಷ ಆಚರಣೆಯಾಗಿದ್ದು ಶ್ರದ್ದಾ ಭಕ್ತಿಯಿಂದ ಕುಟುಂಬದ ಶಾಂತಿ ನೆಮ್ಮದಿಗಾಗಿ ಪ್ರಾರ್ಥಿಸಲಾಗುತ್ತದೆ. ಮಲೆನಾಡು ಭಾಗದಲ್ಲಿ ಇದು ಒಂದು ವಿಶಿಷ್ಟ ಆಚರಣೆಯಾಗಿದ್ದು ಎಲ್ಲರ ಗಮನ ಸೆಳೆಯುತ್ತಿದೆ.
PublicNext
19/11/2024 06:24 pm