ಚಿಕ್ಕಮಗಳೂರು: ಹೊರನಾಡಿನಲ್ಲಿ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಲಕ್ಷ ದೀಪೋತ್ಸವ ಸಡಗರದಿಂದ ನೆರವೇರಿತು. ದೀಪೋತ್ಸವದ ಅಂಗವಾಗಿ ನಡೆದ ಧಾರ್ಮಿಕ ವಿಧಿಗಳು ಭಕ್ತರನ್ನು ಸೆಳೆಯಿತು.
ವಿಶಿಷ್ಟ ಅಲಂಕಾರದಿಂದ ಕಂಗೊಳಿಸುತ್ತಿದ್ದ ದೇವಸ್ಥಾನದ ಪರಿಸರದಲ್ಲಿ ಹಬ್ಬದ ವಾತಾವರಣ ಏರ್ಪಟ್ಟಿತ್ತು. ಅನ್ನಪೂರ್ಣೆಗೆ ಸಂಪ್ರದಾಯಬದ್ಧ ಪೂಜೆ ನೆರವೇರಿಸಿದ ನಂತರ ಉತ್ಸವ ಮೂರ್ತಿಯನ್ನು ದೇವಸ್ಥಾನದ ಸುತ್ತಲೂ ಪ್ರದಕ್ಷಿಣೆ ಹಾಕಲಾಯಿತು.
ಬಣ್ಣ ಬಣ್ಣದ ಧ್ವಜ, ಪತಾಕೆ, ತೋರಣಗಳ ಮುಮ್ಮೇಳ, ವಾದ್ಯ ಸಂಗೀತದ ಹಿಮ್ಮೇಳ ಗಮನ ಸೆಳೆಯಿತು.ಅಲಂಕೃತ ಪಲ್ಲಕ್ಕಿ ಮೂಲಕ ರಥಬೀದಿಯಲ್ಲಿ ದೇವಿಯ ಉತ್ಸವ ನಡೆಯಿತು. ರಥಬೀದಿಯ ಉದ್ದಕ್ಕೂ ಸಾವಿರಾರು ದೀಪಗಳನ್ನು ಬೆಳಗಲಾಯಿತು. ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಭಕ್ತವೃಂದ ಲಕ್ಷ ದೀಪೋತ್ಸವದ ದೃಶ್ಯವನ್ನು ಕಣ್ತುಂಬಿಕೊಂಡರು.
PublicNext
21/11/2024 02:41 pm