ಸಾಗರ : ನಾಡುನುಡಿ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು. ಕನ್ನಡ ನಾಡಿಗೆ ತನ್ನದೆ ಮಹತ್ವವಿದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು.
ಸಾಗರದ ಕೆಳದಿರಾಣಿ ಚೆನ್ನಮ್ಮಾಜಿ ವೃತ್ತದಲ್ಲಿ ವಿದ್ಯಾರಣ್ಯ ಯುವಕ ಸಂಘದ ವತಿಯಿಂದ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು ನಮ್ಮ ಸಂಸ್ಕೃತಿಯ ಬಗ್ಗೆ ಯುವಜನರು ಹೆಚ್ಚಿನ ಕಾಳಜಿ ವಹಿಸಬೇಕು. ಸಂಸ್ಕೃತಿ ಉಳಿಸಿಕೊಂಡು ಹೋದರೆ ಮುಂದಿನ ಪೀಳಿಗೆ ಅದನ್ನು ಪಾಲಿಸಿಕೊಂಡು ಬರುತ್ತದೆ. ವಿದ್ಯಾರಣ್ಯ ಯುವಕ ಸಂಘ ಅನೇಕ ವರ್ಷಗಳಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಸಂದರ್ಭದಲ್ಲಿ ಸಾಂಸ್ಕೃತಿಕ ವೈವಿಧ್ಯ ನಡೆಸಿ ಜನರಲ್ಲಿ ಭಾಷೆ ಬಗ್ಗೆ ಅಭಿಮಾನ ಹುಟ್ಟಿಸುವ ಕೆಲಸ ಮಾಡುತ್ತಿರುವುದು ಅಭಿನಂದಾರ್ಹ ಸಂಗತಿ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಪ್ರದೀಪ್ ಆಚಾರಿ, ವಿದ್ಯಾರಣ್ಯ ಯುವಕ ಸಂಘ ಕನ್ನಡ ರಾಜ್ಯೋತ್ಸವ ಜೊತೆಗೆ ರಾಷ್ಟ್ರೀಯ ಹಬ್ಬಗಳನ್ನು ನಡೆಸಿಕೊಂಡು ಬರುತ್ತಿದೆ. ಇದರ ಜೊತೆಗೆ ಸಾಧಕರನ್ನು ಸನ್ಮಾನಿಸುವುದು, ರಕ್ತದಾನ ಶಿಬಿರ, ಬಡಾವಣೆಯಲ್ಲಿ ಶೈಕ್ಷಣಿಕವಾಗಿ ಸಾಧನೆ ಮಾಡಿದ ಮಕ್ಕಳಿಗೆ ಪುರಸ್ಕಾರದಂತಹ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ ಎಂದು ಹೇಳಿದರು.
ವೇದಿಕೆಯಲ್ಲಿ ವಿದ್ವಾನ್ ಜಿ.ಬಿ.ಜನಾರ್ದನ್, ನಗರಸಭೆ ಸದಸ್ಯರಾದ ಟಿ.ಡಿ.ಮೇಘರಾಜ್, ಆರ್.ಶ್ರೀನಿವಾಸ್, ಮೈತ್ರಿ ಪಾಟೀಲ್, ಗಣೇಶಪ್ರಸಾದ್, ಮಾಜಿ ಸದಸ್ಯ ಸಿದ್ದಪ್ಪ ಕೆ. ಇನ್ನಿತರರು ಹಾಜರಿದ್ದರು. ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
Kshetra Samachara
17/11/2024 07:23 pm