ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾಗರ : 'ಕನ್ನಡ ನೆಲ ಸಹಕಾರಿ ಚಳುವಳಿಯ ತವರು' - ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಸಾಗರ : ಕನ್ನಡ ನೆಲ ಸಹಕಾರಿ ಚಳುವಳಿಯ ತವರು. ಸಹಕಾರಿ ಚಳುವಳಿಯ ಭದ್ರಬೇರು ಕರ್ನಾಟಕದಲ್ಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ವಿನೋಬ ನಗರದಲ್ಲಿ ಭಾನುವಾರ ಅಕ್ಷಯಸಾಗರ ಸೌಹಾರ್ದ ಸಹಕಾರಿ ಸಂಸ್ಥೆಯ ಬೆಳ್ಳಿಹಬ್ಬದ ಅಂಗವಾಗಿ ನಿರ್ಮಿಸಲಾಗಿರುವ ಅಕ್ಷಯ ಬೆಳ್ಳಿಭವನ ಲೋಕಾರ್ಪಣೆ ಮಾಡಿ ಅವರು ಮಾತನಾಡುತ್ತಿದ್ದರು.

ಸಹಕಾರಿ ಕ್ಷೇತ್ರ ಜಾತಿಮತ ಪಂಥವನ್ನು ಮೀರಿದ್ದಾಗಿದೆ. ನಾನು ಸಹ ಶಿಕಾರಿಪುರದ ವೀರಶೈವ ಸಹಕಾರ ಸಂಘದ ಅಧ್ಯಕ್ಷನಾಗುವ ಮೂಲಕ ಸಹಕಾರ ಜೀವನ ಆರಂಭಿಸಿದ್ದೇನೆ ಎಂದು ಹೇಳಲು ಹೆಮ್ಮೆಯಾಗುತ್ತದೆ. ಕರ್ನಾಟಕದಲ್ಲಿ 1905ರಲ್ಲಿ ಸಹಕಾರ ಚಳುವಳಿ ಪ್ರಾರಂಭವಾಯಿತು. ಸಹಕಾರಿ ಕ್ಷೇತ್ರ ಅತ್ಯಂತ ವಿಸ್ತಾರವಾಗಿ ಬೆಳೆಯುತ್ತಿರುವುದು ಸಂತೋಷದ ಸಂಗತಿ. ಸಹಕಾರಿ ಸಂಸ್ಥೆಯೊಂದು ಉನ್ನತ ಸ್ಥಾನಕ್ಕೆ ಹೋಗುತ್ತಿದೆ ಎಂದರೆ ಸ್ಥಳೀಯವಾಗಿ ಹೆಚ್ಚು ಜನರಿಗೆ ಅನುಕೂಲವಾಗುತ್ತಿದೆ ಎನ್ನುವುದನ್ನು ನಾವು ಅರ್ಥೈಸಿಕೊಳ್ಳಬಹುದು. ಅಕ್ಷಯಸಾಗರ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹೇಳಿದರು.

ವೇದಿಕೆಯಲ್ಲಿ ಮಳಲಿಮಠದ ಶ್ರೀಗಳು, ಜಡೆಮಠದ ಶ್ರೀಗಳು, ಕೋಣಂದೂರು ಬ್ರಹನ್ಮಠದ ಶ್ರೀಗಳು, ಮೂಲೆಗದ್ದೆ ಮಠದ ಶ್ರೀಗಳು, ಕ್ಯಾಸನೂರು ಮಠದ ಶ್ರೀಗಳು, ಸಂಸದ ಬಿ.ವೈ.ರಾಘವೇಂದ್ರ,ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು,ಮಾಜಿ ಸಚಿವ ಹರತಾಳು ಹಾಲಪ್ಪ, ನಂಜನಗೌಡ್ರು, ಎ.ಆರ್.ಪ್ರಸನ್ನಕುಮಾರ್, ಬಿ.ಎಚ್.ಮಲ್ಲಿಕಾರ್ಜುನ ಹಕ್ರೆ, ಬಿ.ಎ.ಇಂದೂಧರ ಗೌಡ, ಚಂದ್ರಶೇಖರ್ ನಾಗಭೂಷಣ್ ಕಲ್ಮನೆ, ಎಂ.ಎಚ್.ಗೌಡ್ರು, ಬಸಪ್ಪ ಗೌಡ್ರು ಕೆರೋಡಿ, ಜಗದೀಶ್ ಒಡೆಯರ್, ಎಂ.ಎಸ್.ಗೌಡರ್ ಇನ್ನಿತರರು ಹಾಜರಿದ್ದರು.

Edited By : PublicNext Desk
PublicNext

PublicNext

17/11/2024 07:18 pm

Cinque Terre

47.73 K

Cinque Terre

0

ಸಂಬಂಧಿತ ಸುದ್ದಿ