ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಡಗು : ಭಾಗಮಂಡಲದಲ್ಲಿ ಶೃದ್ಧಾ ಭಕ್ತಿಯಿಂದ ನಡೆದ ಕಾವೇರಿ ಆರತಿ

ಕೊಡಗು: ಕೊಡಗು ಜಿಲ್ಲಾ ವಿಶ್ವ ಹಿಂದೂ ಪರಿಷತ್ ವತಿಯಿಂದ ಭಾಗಮಂಡಲದ ಕಾವೇರಿ ಕನ್ನಿಕೆ ಹಾಗೂ ಸುಜೋತಿ ನದಿಗಳ ತ್ರಿವೇಣಿ ಸಂಗಮದಲ್ಲಿ ಕಾವೇರಿ ಆರತಿ ಕಾರ್ಯಕ್ರಮ ನಡೆಯಿತು. ಭಜನೆ, ವೇದಘೋಷದೊಂದಿಗೆ ಕಾವೇರಮ್ಮನಿಗೆ ಶೃದ್ಧಾ ಭಕ್ತಿಯಿಂದ ಆರತಿ ಬೆಳಗಲಾಯಿತು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಜೇಷ್ಠ ಪ್ರಚಾರಕರಾದ ಶ್ರೀ ಸು. ರಾಮಣ್ಣ , ವಿಶ್ವ ಹಿಂದೂ ಪರಿಷತ್ನ ದಕ್ಷಿಣ ಪ್ರಾಂತ ಸಹ ಕಾರ್ಯದರ್ಶಿಗಳಾದ ಶ್ರೀ ಶರಣ್ ಪಂಪ್ ವೆಲ್, ಭಾಗವಹಿಸಿದ್ದರು. ಸಂಜೆ 5:30 ಗಂಟೆಗೆ ಆರಂಭವಾದ ಕಾರ್ಯಕ್ರಮ ರಾತ್ರಿ ಎಂಟು ಗಂಟೆಯವರೆಗೆ ಜರುಗಿತು. ಕಾವೇರಮ್ಮನಿಗೆ ಕಲ್ಪೋತರ ಪೂಜೆ, ಅಷ್ಟೋತ್ತರ ಪೂಜೆ, ಮತ್ತು ಕುಂಕುಮಾರ್ಚನೆ ನೆರವೇರಿತು. ಕಾವೇರಮ್ಮನಿಗೆ ಪುಷ್ಪ ಅಲಂಕಾರವನ್ನು ಇದೇ ಸಂದರ್ಭ ನೆರವೇರಿಸಲಾಯಿತು.

ಬೆಂಗಳೂರು ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ದುರ್ಗಾವಾಹಿನಿಯ ಅಸಂಖ್ಯ ಮಹಿಳೆಯರು ಕಾವೇರಿ ಮಾತೆಗೆ ದೀಪ ಬೆಳಗಿಸಿ ಕಾವೇರಿ ನದಿಗೆ ಅರ್ಪಿಸಿದರು. ನಂತರ ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನೆರವೇರಿತು. ಹುಣ್ಣಿಮೆಯ ಚಂದ್ರನ ಬೆಳಕಿನಲ್ಲಿ ಕಾವೇರಿ, ಕನ್ನಿಕೆ, ಸುಜೋತಿ ನದಿ ತಟದಲ್ಲಿ ಅಸಂಖ್ಯ ಭಕ್ತಾದಿಗಳ ಸೇರ್ಪಡೆಯೊಂದಿಗೆ ವಿಶ್ವ ಹಿಂದೂ ಪರಿಷತ್ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿತ್ತು. ಕಾರ್ಯಕ್ರಮದ ಮಹತ್ವದ ಬಗ್ಗೆ ಅತಿಥಿಗಳು ಮಾಹಿತಿ ನೀಡಿದ್ರು.

ಭಾಗಮಂಡಲ ತಕ್ಕ ಮುಖ್ಯಸ್ಥರಾದ ಬಲ್ಲಡ್ಕ ಅಪ್ಪಾಜಿ, ತಲಕಾವೇರಿ ಭಾಗಮಂಡಲದ ಪಾರುಪತ್ತೆ ಗಾರರಾದ ಮಹೇಶ್, ಭಾಗಮಂಡಲ ದೇವಾಲಯದ ಪ್ರಧಾನ ಅರ್ಚಕರಾದ ಹರೀಶ್ ಭಟ್, ಅರ್ಚಕ ವೃಂದ, ಹಾಗೂ ಸಿಬ್ಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿಶ್ವ ಹಿಂದೂ ಪರಿಷತ್ನ ಕೊಡಗು ಜಿಲ್ಲೆಯ ವಿವಿಧ ಘಟಕಗಳ ಅಧ್ಯಕ್ಷರು ಪದಾಧಿಕಾರಿಗಳು, ಹಾಗೂ ಕಾರ್ಯಕರ್ತರು. ಪಾಲ್ಗೊಂಡಿದ್ದರು.

Edited By : Somashekar
PublicNext

PublicNext

16/11/2024 05:23 pm

Cinque Terre

23.09 K

Cinque Terre

0

ಸಂಬಂಧಿತ ಸುದ್ದಿ