ಕೊಡಗು: ಕೊಡಗು ಜಿಲ್ಲೆ ವಿರಾಜಪೇಟೆಯಿಂದ ಕೇರಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಮೀಪ ಅಂದ್ರೆ ವಿರಾಜಪೇಟೆಯ ಹೊರ ವಲಯದ ರಸ್ತೆಯ ಇಕ್ಕೆಲಗಳಲ್ಲಿ ಖಾಸಗಿ ಬಸ್ ಗಳು ಪಾರ್ಕಿಂಗ್ ಮಾಡುತ್ತಿರೋದಕ್ಕೆ ವಿರಾಜಪೇಟೆಯ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಇದು ಕರ್ನಾಟಕ ಮತ್ತು ಕೇರಳ ರಾಜ್ಯದ ಮುಖ್ಯ ಹೆದ್ದಾರಿ, ಈ ರಸ್ತೆಯಲ್ಲಿ ನಿರಂತರವಾಗಿ ಸಾವಿರಾರು ವಾಹನಗಳು ಹಗಲು ರಾತ್ರಿ ಎನ್ನದೇ ಸಂಚರಿಸುತ್ತವೆ. ಆದ್ರೆ ಖಾಸಗಿ ಬಸ್ ಗಳು ರಸ್ತೆಯ ಇಕ್ಕೆಲಳಲ್ಲಿ ಪಾರ್ಕಿಂಗ್ ಮಾಡುತ್ತಿರೋದು ನಗರದ ಜನತೆಗೆ ತುಂಬಾ ತೊಂದರೆಯಾಗಿದೆ. ದಯವಿಟ್ಟು ಖಾಸಗಿ ಬಸ್ ನಿಲುಗಡೆಗೆ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಕೆಲವು ತಿಂಗಳ ಹಿಂದೆ ಇದೇ ರಸ್ತೆಯಲ್ಲಿ ಸರಣಿ ಅಪಘಾತವಾಗಿದ್ದು ಸುಮಾರು ಹದಿಮೂರು ವಾಹನಗಳು ಜಖಂಗೊಂಡಿತ್ತು. ಈ ರಸ್ತೆಯಲ್ಲಿ ಶಾಲಾ ವಾಹನಗಳು, ಬೃಹತ್ ಗಾತ್ರದ ವಾಹನಗಳು ಸಂಚರಿಸಲು ಸಾಧ್ಯವಿಲ್ಲದಾಗಿದೆ. ಹಾಗೂ ಸಾರ್ವಜನಿಕ ಸ್ಮಶಾನ ಕೂಡ ಈ ರಸ್ತೆಯಲ್ಲಿ ಇದೆ. ಪುರಸಭೆ ಹಾಗೂ ಪೊಲೀಸ್ ಇಲಾಖೆ ತಕ್ಷಣ ಕ್ರಮವನ್ನು ಕೈಗೊಳ್ಳುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.
Kshetra Samachara
11/11/2024 12:07 pm