ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಡಗು: ಪುರಸಭೆಯಿಂದ ತೋಡಿನಲ್ಲಿ ಹೂಳೆತ್ತುವಿಕೆ- ಒತ್ತುವರಿದಾರರ ತಕರಾರು

ಕೊಡಗು ಜಿಲ್ಲೆ ವಿರಾಜಪೇಟೆ ಸರ್ಕಾರಿ ಬಸ್ ನಿಲ್ದಾಣದ ಮುಂದಿನ ಭಾಗದ ರಸ್ತೆಯಲ್ಲಿ ಕೆಲವು ದಿನಗಳ ಹಿಂದೆ ಸುರಿದ ಭಾರಿ ಮಳೆಗೆ ತೋಡಿನ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿದು ಮುಖ್ಯ ರಸ್ತೆಗೆ ಬಂದು ಬಹಳ ಪ್ರಮಾಣದ ನಷ್ಟವಾಗಿತ್ತು.ಅಕ್ಕ ಪಕ್ಕದ ಅಂಗಡಿ ಮಳಿಗೆಗೆ ನುಗ್ಗಿ ಬಹಳ ನಷ್ಟವಾದ ಪರಿಣಾಮ ಪುರಸಭೆ ಸದಸ್ಯರು ತಕ್ಷಣ ಈ ರಾಜ ಕಾಲುವೆ ತೋಡಿನಲ್ಲಿ ಮೊಗರಗಲ್ಲಿಯಿಂದ ಕಸಕಡ್ಡಿಗಳು‌, ಬಟ್ಟೆಗಳು, ಮರದ ತುಂಡುಗಳು ಟಯರ್ ಗಳು ನೀರಿನ ರಭಸಕ್ಕೆ ಸಿಕ್ಕಿ ಹಾಕಿಕೊಂಡಿತ್ತು. ಅಲ್ಲದೆ, ಮಳೆ ನೀರು ಹರಿಯುವ ಜಾಗವನ್ನು ಕೆಲವರು ಒತ್ತುವರಿ ಮಾಡಿ ಕೊಂಡಿದ್ದರು.

ಪುರಸಭೆ ವತಿಯಿಂದ ಒತ್ತುವರಿ ದಾರರಿಗೆ ಅನೇಕ ಬಾರಿ ನೋಟೀಸ್ ಜಾರಿ ಮಾಡಲಾಗಿತ್ತು ,ಆದರೂ ಕೂಡ ಪುರಸಭೆ ನೋಟಿಸ್ ಗೆ ಜಗ್ಗದ ಒತ್ತುವರಿ ದಾರರು, ಇಂದು ಅಲ್ಲಿನ ಚುನಾಯಿತ ಸದಸ್ಯರಾದ ಅಗಸ್ಟೀನ್ ಬೆನ್ನಿಹಾಗೂ ಪಕ್ಕದ ವಾರ್ಡ್ ನ ಸದಸ್ಯರಾದ ಮಹಮ್ಮದ್ ರಾಫಿ ಯವರು ಜೆಸಿಬಿ ಮೂಲಕ ತೋಡಿ ನಲ್ಲಿ ಸಿಕ್ಕಿ ಹಾಕಿಕೊಂಡ ಕಸವನ್ನು ತೆರವು ಗೊಳಿಸಲು ಮುಂದಾದರು. ಅಲ್ಲಿ ನ ನಿವಾಸಿ ಗಳು ಪುರಸಭೆ ಸದಸ್ಯರ ಜೊತೆಯಲ್ಲಿ ವಾದ ಮಾಡಲು ಆರಂಭಿಸಿದರು. ತಕ್ಷಣ ಆಗಮಿಸಿ ದ ಪುರಸಭೆ ಅಧ್ಯಕ್ಷರಾದ ಎಂ.ಕೆ. ದೇಚಮ್ಮ ಅವರು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿ ತೋಡಿನಲ್ಲಿ ತುಂಬಿದ್ದ ತ್ಯಾಜ್ಯ ಹೂಳೆತ್ತುವ ಕಾರ್ಯ ಮಾಡಿದ್ರು.

Edited By : Manjunath H D
PublicNext

PublicNext

18/11/2024 07:24 am

Cinque Terre

36.71 K

Cinque Terre

0

ಸಂಬಂಧಿತ ಸುದ್ದಿ