ಚಿಕ್ಕಮಗಳೂರು : ಶಾಸಕ ಹೆಚ್.ಡಿ ತಮ್ಮಯ್ಯ ನಗರದ ಅರವಿಂದ ನಗರ 26, 27ನೇ ವಾರ್ಡಿಗೆ ಭೇಟಿ ನೀಡಿ ನಿವಾಸಿಗಳ ಕುಂದು ಕೊರತೆಯನ್ನು ಆಲಿಸಿದರು. ಈ ವೇಳೆ ನಿವಾಸಿಗಳು ತಮ್ಮ ವಾರ್ಡಿನಲ್ಲಿ ಕುಡಿಯುವ ನೀರಿನ ಸಮಸ್ಯೆ, ಯುಜಿಡಿ ಸಮಸ್ಯೆ, ಇನ್ನು ಮುಂತಾದ ಸಮಸ್ಯೆಗಳನ್ನು ಬಗೆಹರಿಸಿ ಕೊಡುವಂತೆ ಶಾಸಕರಲ್ಲಿ ಮನವಿ ಮಾಡಿದರು.
ಸಮಸ್ಯೆಗಳನ್ನು ಆಲಿಸಿದ ಶಾಸಕರು ಆದಷ್ಟು ಬೇಗ ನಿಮ್ಮ ವಾರ್ಡಿನ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು. ಬಳಿಕ ಶ್ರೀಲೇಖ ಚಿತ್ರಮಂದಿರ ಸಮೀಪದ ಶ್ರೀ ಸೋಮೇಶ್ವರ ದೇವಾಲಯ ಮತ್ತು ಸಮುದಾಯ ಭವನ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
PublicNext
14/11/2024 03:27 pm