ಚಿಕ್ಕಮಗಳೂರು: ಜನರಿಂದ ವರ ಪಡೆದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಜನರ ಪಾಲಿಗೆ ಭಸ್ಮಾಸುರವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಕಿಡಿಕಾರಿದ್ದಾರೆ.
ಅದು ಜಮೀರ್ ಅಹಮದ್ ಓರ್ವನ ನಿಮಿತ್ತ ಅಷ್ಟೆ ವಕ್ಫ್ ಬೋರ್ಡಿಗೆ ಪರಮಾಧಿಕಾರ ಸಿಕ್ಕಿದ್ದೆ ನಾವು ಕಾಂಗ್ರೆಸ್ಸಿಗೆ ಮತ ಕೊಟ್ಟಿದಕ್ಕೆ ಎಂದು ಕಿಡಿಕಾರಿದ್ದಾರೆ. ಶಿವನ ರೂಪಿಯಾಗಿ ಜನ ವರ ಕೊಟ್ಟಿದ್ದಾರೆ. ವರ ಪಡೆದು ಶಿವನ ತಲೆ ಮೇಲೆ ಕೈ ಇಡಲು ಕಾಂಗ್ರೆಸ್ ಬಂದಿರೋದು ಇದಕ್ಕೆ ಹಿಂದೂ ಸಂಘಟನೆ ಅಷ್ಟೆ ಉತ್ತರ ಅಸ್ಪೃಶ್ಯತೆ, ಜಾತಿಯತೆ ನಾಶ ಎಲ್ಲದಕ್ಕೂ ಹಿಂದುತ್ವವೇ ಉತ್ತರ ಎಂದಿದ್ದಾರೆ.
ಹಿಂದೂ ಇಲ್ಲದಿದ್ರೆ ರಾಷ್ಟ್ರ ಉಳಿಯಲ್ಲ, ಶರಿಯಾದಿಂದ ಸಂವಿಧಾನ ಉಳಿಯಲ್ಲ ಹಿಂದೂ ನಾಶವಾಗಿದ್ದ ದಿನ ದೇಶದಲ್ಲಿ ಸಂವಿಧಾನ ಇರಲ್ಲ ಸಂವಿಧಾನ, ದೇಶ, ಭಾರತ, ದೇವಸ್ಥಾನ, ಜಮೀನು, ವಿಧಾನಸೌಧ, ಸಂಸತ್ತು ಉಳಿಬೇಕು ಅಂದ್ರು ಹಿಂದುತ್ವ ಬೇಕು ಎಂದು ಪರಿಷತ್ ಸದಸ್ಯ ಸಿ.ಟಿ ರವಿ ಕಿಡಿಕಾರಿದ್ದಾರೆ.
PublicNext
10/11/2024 07:04 pm