ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೌರಶಕ್ತಿಯ ಬಳಕೆಯಿಂದ ಹೆಚ್ಚುಇಂಧನ ಉತ್ಪತ್ತಿ : ಶಾಸಕ ರಾಜೇಗೌಡ

ಚಿಕ್ಕಮಗಳೂರು: ಬರಡು ಅಥವಾ ನಿರುಪಯುಕ್ತ ಪ್ರದೇಶದಲ್ಲಿ ಸೋಲಾರ್ ಸಿಸ್ಟಂ ಅಳವಡಿಸಿ ಇಂಧನ ಶಕ್ತಿ ಉತ್ಪಾದಿಸಲು ರಾಜ್ಯಸರ್ಕಾರ ಶೇ.80 ಸಬ್ಸಿಡಿ ಒದಗಿಸಿ ಸ್ವಉದ್ಯೋಗ ಕೈಗೊಳ್ಳಲು ಯುವಸಮೂಹಕ್ಕೆ ಸಹಾಯಧನ ಕಲ್ಪಿಸುತ್ತಿದೆ ಎಂದು ರಾಜ್ಯ ನವೀಕರಿಸಬಹುದಾದ ಇಂಧನ ಅಭಿವೃದ್ದಿ ನಿಗಮದ ಅಧ್ಯಕ್ಷ ಟಿ.ಡಿ.ರಾಜೇಗೌಡ ಹೇಳಿದ್ರು. ನಗರದ ಆದಿಚುಂಚನಗಿರಿ ತಾಂತ್ರಿಕ ವಿದ್ಯಾಲಯದಲ್ಲಿ ಏರ್ಪಡಿಸಿದ್ಧ ಭವಿಷ್ಯದಲ್ಲಿ ನವೀಕರಿಸ ಬಹುದಾದ ಇಂಧನ ಸಂಪನ್ಮೂಲಗಳ ಕುರಿತ ಕಾರ್ಯಾಗಾರವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ದೇಶ-ವಿದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಸಿರು ಇಂಧನ ಉತ್ಪಾದಿಸುವುದು

ಸಮಾರೋಪದಿಯಲ್ಲಿ ನಡೆಯುತ್ತಿದೆ. ಪ್ರಕೃತಿಯಲ್ಲಿ

ದೊರೆಯುವ ಗಾಳಿ, ನೀರು, ಸೂರ್ಯನ ಕಿರಣ ಬಳಸಿ ಕೊಂಡು

ಪರಿಸರಕ್ಕೆ ಹಾನಿಯಾಗದೇ ಜೈವಿಕ ವಿಧಾನದಡಿ ವಿದ್ಯುತ್‌ಶಕ್ತಿ

ಉತ್ಪಾದನೆಯಲ್ಲಿ ಸರ್ಕಾರಗಳು ತೊಡಗಿಸಿಕೊಂಡಿದೆ ಎಂದು

ಹೇಳಿದರು. ಗುಣಮಟ್ಟದ ಇಂಧನ ಉತ್ಪ್ಪತ್ತಿ ಸಂಬಂಧ ವಿದೇಶಿ

ಕಂಪನಿಯೊಂದಕ್ಕೆ ಸಂಸ್ಥೆ ಒಪ್ಪಂದ ಮಾಡಿಕೊಂಡು ಹೆಚ್ಚಿನ

ಮಟ್ಟದಲ್ಲಿ ಶುದ್ಧ ಇಂಧನಕ್ಕೆ ಮುಂದಾಗಿದೆ ಎಂದ ಅವರು

ಸೋಲಾರ್‌ಗೆ ಹೆಚ್ಚು ಪ್ರಾಮುಖ್ಯತೆ ಯನ್ನು ಸರ್ಕಾರ ನೀಡಿರುವ

ಪರಿಣಾಮ ರಾಜ್ಯವು ಇಂಧನ ಉತ್ಪಾದನೆಯಲ್ಲಿ ಮೂರನೇ ಸ್ಥಾನ ಪಡೆದು ಕೊಂಡಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಎಐಟಿ ಕಾಲೇಜು ಆಡಳಿತ ಮಂಡಳಿ ನಿರ್ದೇಶಕ ಸಿ.ಕೆ.ಸುಬ್ಬರಾಯ, ಪ್ರಾಂಶುಪಾಲ ಡಾ. ಸಿ.ಟಿ.ಜಯದೇವ್, ಆಡಳಿತ ಮಂಡಳಿ ಸದಸ್ಯ ಕೆ.ಮೋಹನ್, ಮೆಕ್ಯಾನಿಕಲ್ ಇಂಜನಿಯರ್ ವಿಭಾಗದ ಮುಖ್ಯಸ್ಥ ಡಾ.ಜೆ.ಎಂ.ನಾರಾಯಣ್, ಹೆಚ್‌ಓಡಿ ಸತ್ಯನಾರಾಯಣ್, ಜಿಲ್ಲಾ ಒಕ್ಕಲಿಗರ ಸಂಘದ ಗೌರವ ಕಾರ್ಯದರ್ಶಿ

ಮಾಡ್ಲಾ ಪ್ರಕಾಶ್ ಮತ್ತಿತರರಿದ್ದರು.

Edited By : PublicNext Desk
Kshetra Samachara

Kshetra Samachara

11/11/2024 07:57 pm

Cinque Terre

580

Cinque Terre

0

ಸಂಬಂಧಿತ ಸುದ್ದಿ