ಚಿಕ್ಕಮಗಳೂರು: ಧರ್ಮಸ್ಥಳ ಸ್ವಸಹಾಯ ಸಂಘದ ಅಂಬಳೆ ವಲಯದ ಮುತ್ತಿನಮ್ಮ ತಂಡದ ಸದಸ್ಯೆ ಗೌರಮ್ಮ ಎಂಬುವವರ ಮನೆ ಮಳೆಯಿಂದ ಹಾನಿಯಾಗಿತ್ತು. ಧರ್ಮಸ್ಥಳ ಸ್ವಸಹಾಯ ಸಂಘದ ಪ್ರಕೃತಿಕ ವಿಕೋಪ ಅನುದಾನದಡಿಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು 1ಲಕ್ಷ ಹಣವನ್ನು ಪರಿಹಾರವಾಗಿ ನೀಡಿದ್ದು. ಇದರ ಮಂಜೂರಾತಿ ಪತ್ರವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲ್ಲೂಕು ಯೋಜನಾಧಿಕಾರಿ ರಮೇಶ್ ನಾಯಕ್ ಗೌರಮ್ಮ ಅವರಿಗೆ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು ದೊದ್ದೇಗೌಡ, ಮದ್ಯಾವರ್ಜನಾ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಸವರಾಜು, ವಲಯ ಮೇಲ್ವಿಚಾರಕಿ ರೂಪ, ಹಾಗೂ ಸೇವಾಪ್ರತಿನಿಧಿ ಸದಸ್ಯರು ಉಪಸ್ಥಿತರಿದ್ದರು.
Kshetra Samachara
14/11/2024 04:03 pm