ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಮಾದಕವಸ್ತುಗಳ ನಿಯಂತ್ರಣಕ್ಕೆ ಮೊಬೈಲ್ ಆ್ಯಪ್ ಸಿದ್ದ

ಚಿಕ್ಕಮಗಳೂರು: ಮಾದಕ ವಸ್ತುವಿನ ಬಳಕೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಇದನ್ನು ಮೂಲದಿಂದಲೆ ತಡೆಗಟ್ಟುವ ಉದ್ದೇಶದಿಂದ ಚಿಕ್ಕಮಗಳೂರು ಜಿಲ್ಲಾ ಪೊಲೀಸರು ಕಾರ್ಯನಿರತವಾಗಿದ್ದು ಇನ್ನೂ ಒಂದು ಹೆಜ್ಜೆ ಮುಂದುವರೆದು ಮಾದಕ ಬೆಳೆಯನ್ನು ಬೆಳೆಯುತ್ತಿರುವ ಬೆಳೆಗಾರರು, ಮಾರಾಟಗಾರರು, ಬಳಸುತ್ತಿರುವ ಗ್ರಾಹಕರು, ಸಿಂಥೆಟಿಕ್ ಡ್ರಗ್ಸ್ ಗಳನ್ನು ತಯಾರಿಸುತ್ತಿರುವ ಲ್ಯಾಬ್‌ಗಳು, ಅದರ ಸಂಗ್ರಹಣೆ ಮಾಡುತ್ತಿರುವ ಸಂಗ್ರಹಗಾರರು, ಸಾಗಾಣಿಕೆ ಮಾಡುತ್ತಿರುವ ಸಾರಿಗೆ ವ್ಯವಸ್ಥೆ ಇತ್ಯಾದಿಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಇದ್ದಲ್ಲಿ ಅದನ್ನು ಜಿಲ್ಲಾ ಪೊಲೀಸರೊಂದಿಗೆ ಹಂಚಿಕೊಳ್ಳುವ ಸಂಬಂಧ ಕರ್ನಾಟಕ ಪೊಲೀಸರ ನೂತನ ಉಪಕ್ರಮವಾಗಿ ನಶೆ ಮುಕ್ತ ಕರ್ನಾಟಕ (Drug Free Karnataka) ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಲಾಗಿದ್ದು

ಸಾರ್ವಜನಿಕರಿಗೆ ಈ ಮೊಬೈಲ್ ಆ್ಯಪ್ ನ್ನು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿರುತ್ತದೆ. ಈ ಮೊಬೈಲ್ ಆ್ಯಪ್‌ನ ವಿಶೇಷತೆ ಏನೆಂದರೆ ಸಾರ್ವಜನಿಕರು ಇದನ್ನು ತಮ್ಮ ತಮ್ಮ ಮೊಬೈಲ್‌ನಲ್ಲಿ ಅಳವಡಿಸಿಕೊಂಡು ಮಾದಕ ವಸ್ತುವಿನ ಕುರಿತಾಗಿ ಇಂಗ್ಲೀಷ್ ಮತ್ತು ಕನ್ನಡದಲ್ಲಿ ವರದಿ ಮಾಡಬಹುದಾಗಿರುತ್ತದೆ. ಸಾರ್ವಜನಿಕರು ನೀಡುವ ಮಾಹಿತಿಗಳನ್ನು ಇಲಾಖೆಯಿಂದ ಗೌಪ್ಯವಾಗಿರಿಸಲಾಗುವುದು.

ಈ ಸಂಬಂಧ ಎಲ್ಲಾ ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳುವಂತೆ ಜಿಲ್ಲಾ ಪೊಲೀಸರು ಮನವಿ ಮಾಡಿದ್ದಾರೆ.

Edited By : PublicNext Desk
Kshetra Samachara

Kshetra Samachara

13/11/2024 03:51 pm

Cinque Terre

500

Cinque Terre

0

ಸಂಬಂಧಿತ ಸುದ್ದಿ