ಚಿಕ್ಕಮಗಳೂರು: ರಸ್ತೆ ಗುಂಡಿಗಳಿಂದ ಬೇಸತ್ತಿರುವ ಸಾರ್ವಜನಿಕರು ಪ್ರತಿಭಟನೆಯ ವಿನೂತನ ಹಾದಿ ಕಂಡುಕೊಂಡಿದ್ದಾರೆ. ನಗರದ ವಿಜಯಪುರದ ಮುಖ್ಯ ರಸ್ತೆಯಲ್ಲಿ ವಿನೂತನ ಬ್ಯಾನರ್ ಹಾಕಿ ನಗರಸಭೆಗೆ ಛೀಮಾರಿ ಹಾಕಿದ್ದಾರೆ. ಗುಂಡಿ ಮುಚ್ಚದಿರಲು ನಿಧಿ ಇದೆ ಎಂಬ ಆಸೆಯಿಂದ ಕಾಯುತ್ತಿರುವ ನಗರಸಭೆ ಎಂಬ ಶೀರ್ಷಿಕೆ ಅಡಿ ಬ್ಯಾನರ್ ಹಾಕಿದ್ದು, ಎಚ್ಚರವಾಗಿ ಚಲಿಸಿ ಗುಂಡಿಗೆ ಬಿದ್ದರೆ ನಿಧಿ ಸಿಗುವುದಿಲ್ಲ ಎಂದು ಸ್ಥಳೀಯ ಜನಪ್ರತಿನಿಧಿಗಳನ್ನು ಹಾಗೂ ಅಧಿಕಾರಿಗಳನ್ನು ಅಣಕಿಸಲಾಗಿದೆ. ಎಲ್ಲಾ ಜನ ಪ್ರತಿನಿಧಿಗಳಿಗೆ ವಿಜಯಪುರ ಮುಖ್ಯ ರಸ್ತೆಯ ನಾಗರಿಕರಿಂದ ಗೌರವ ವಂದನೆ ಎಂದು ವ್ಯಂಗ್ಯವಾಡಿದ್ದಾರೆ. ಈ ಗುಂಡಿಗೆ ಶೀಘ್ರದಲ್ಲೇ ಹಾಲುತುಪ್ಪ ಬಿಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಮನವಿ ಮಾಡಿದ್ದಾರೆ.
Kshetra Samachara
13/11/2024 08:53 pm