ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ರಸ್ತೆದಾಟಿದ ದೈತ್ಯ ಗಾತ್ರದ ಗಜರಾಜ

ಚಿಕ್ಕಮಗಳೂರು: ತಾಲೂಕಿನ ಮುತೋಡಿ ಅರಣ್ಯ ವ್ಯಾಪ್ತಿಯ ಸೀಗೆಖಾನ್ ಗ್ರಾಮದ ಬಳಿ ದೈತ್ಯ ಗಾತ್ರದ ಒಂಟಿ ಸಲಗವೊಂದು ರಸ್ತೆ ದಾಟುತ್ತಿರುವ ದೃಶ್ಯವನ್ನು ಪ್ರವಾಸಿಗರು ಮೊಬೈಲ್ ನಲ್ಲಿ ಸೆರೆಹಿಡಿದ್ದಾರೆ.

ಆನೆಯ ಗಾತ್ರ ಹಾಗೂ ಕೋರೆಯನ್ನು ಕಂಡು ಪ್ರವಾಸಿಗರು ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ಈ ಭಾಗದಲ್ಲಿ ಸಲಗ ಕಾಣಿಸಿಕೊಳ್ಳುತ್ತಿದ್ದು ಸ್ಥಳೀಯರು, ವಾಹನ ಸವಾರರು, ಪ್ರವಾಸಿಗರಲ್ಲಿ ಆತಂಕ ಸೃಷ್ಟಿಸಿದೆ. ಹೀಗಾಗಿ ರಾತ್ರಿ ಹೊತ್ತಿನಲ್ಲಿ ಸ್ಥಳೀಯರು ಓಡಾಡಲು ಹಿಂದೇಟು ಹಾಕುತ್ತಿದ್ದಾರೆ.

Edited By : PublicNext Desk
PublicNext

PublicNext

13/11/2024 03:29 pm

Cinque Terre

34.5 K

Cinque Terre

0

ಸಂಬಂಧಿತ ಸುದ್ದಿ