ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು : ಬೀಟಮ್ಮ ಗ್ಯಾಂಗಿನ ಆನೆ ಸಾವು ಪ್ರಕರಣ - ಮೆಸ್ಕಾಂ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲು

ಚಿಕ್ಕಮಗಳೂರು : ವಿದ್ಯುತ್ ತಂತಿ ತಗುಲಿ ಬೀಟಮ್ಮ ತಂಡದ ಸಲಗ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮೆಸ್ಕಾಂ ಅಧಿಕಾರಿಗಳ ವಿರುದ್ಧ ಅರಣ್ಯಾಧಿಕಾರಿ ಹರೀಶ್ ಆಲ್ದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರಿನ ಅನ್ವಯ ಮೆಸ್ಕಾಂನ ಜ್ಯೂನಿಯರ್ ಎಂಜಿನಿಯರ್, ಅಸಿಸ್ಟೆಂಟ್ ಎಂಜಿನಿಯರ್, ಎಕ್ಸಿಕ್ಯೂಟಿವ್ ಎಂಜಿನಿಯರ್ ವಿರುದ್ದ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಮೂವರ ವಿರುದ್ದ ದೂರು ನೀಡಲಾಗಿದೆ. ಕಳೆದ ಶನಿವಾರ ಆಲ್ದೂರು ಸಮೀಪದ ತುಡುಕೂರು - ಪುರ ನಡುವಿನ ಕಾಫಿ ತೋಟದಲ್ಲಿ ಸಲಗ ವಿದ್ಯುತ್ ಸ್ಪರ್ಶಸಿ ಸಲಗ ಮೃತಪಟ್ಟಿತ್ತು.

Edited By : PublicNext Desk
PublicNext

PublicNext

12/11/2024 04:46 pm

Cinque Terre

12.27 K

Cinque Terre

0

ಸಂಬಂಧಿತ ಸುದ್ದಿ