ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಪ್ಪ: ರೈತ ವಿರೋಧಿ ಅರಣ್ಯ ಕಾಯ್ದೆಗಳನ್ನು ಹಿಂಪಡೆಯಲು ಆಗ್ರಹ

ಕೊಪ್ಪ: ಮಲೆನಾಡಿಗೆ ಮಾರಕವಾಗಿರುವ ಅರಣ್ಯ ಕಾಯ್ದೆಗಳನ್ನು ವಿರೋಧಿಸಿ ತಾಲೂಕಿನ ಕಲ್ಲುಗುಡ್ಡೆ ಗ್ರಾಮದಿಂದ ಕೊಪ್ಪ ಪಟ್ಟಣದವರೆಗೆ ಕಾಲ್ನಡಿಗೆ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು. ಜಾಥಾದಲ್ಲಿ ನೂರಾರು ಮಲೆನಾಡಿನ ಗ್ರಾಮಸ್ಥರು ಪಾಲ್ಗೊಂಡು ಮಲೆನಾಡಿಗೆ ಮಾರಕವಾಗಿರುವ ಅರಣ್ಯ ಕಾಯ್ದೆಗಳನ್ನು ರಾಜ್ಯ ಸರ್ಕಾರ ಈ ಕೂಡಲೇ ತೆಗೆದು ಹಾಕಬೇಕೆಂದು ಒತ್ತಾಯಿಸಿದರು.

ದಿನದಿಂದ ದಿನಕ್ಕೆ ಅರಣ್ಯ ಕಾಯ್ದೆಗಳಿಂದ ಮಲೆನಾಡಿನ ಜನರು ಪರಿತಪಿಸುವಂತಾಗಿದೆ. ಶೀಘ್ರವೇ ಅನುಪಯುಕ್ತವಾದ ಹಾಗೂ ಮಲೆನಾಡಿನ ಜನರಿಗೆ ಉಪಯೋಗವಲ್ಲದ ಕಾಯ್ದೆಗಳನ್ನು ನಿಷೇಧಿಸಬೇಕು, ಅಲ್ಲದೆ ಇತ್ತೀಚಿನ ದಿನಗಳಲ್ಲಿ ಮಲೆನಾಡಿನ ಜನರೇ ಮಲೆನಾಡನ್ನೇ ತೊರೆಯುವಂತಾಗಿದೆ ಎಂದು ಎಚ್ಚರಿಕೆ ನೀಡಿದ್ದರು .

Edited By : PublicNext Desk
PublicNext

PublicNext

12/11/2024 04:19 pm

Cinque Terre

8.13 K

Cinque Terre

0

ಸಂಬಂಧಿತ ಸುದ್ದಿ